ಗ್ಯಾರಂಟಿ ಯೋಜನೆ-ದಾಖಲೆ ಕೇಳಿ ಸತಾಯಿಸುತ್ತಿರುವ ರಾಜ್ಯ ಸರಕಾರ: ಅಬ್ದುಲ್ ಮಜೀದ್ ಆರೋಪ

ಗ್ಯಾರಂಟಿ ಯೋಜನೆ-ದಾಖಲೆ ಕೇಳಿ ಸತಾಯಿಸುತ್ತಿರುವ ರಾಜ್ಯ ಸರಕಾರ: ಅಬ್ದುಲ್ ಮಜೀದ್ ಆರೋಪ


ಮಂಗಳೂರು: ಅಸೆಂಬ್ಲಿ ಚುನಾವಣೆ ಬಳಿಕ ಸರ್ಕಾರ ಜಾರಿಗೊಳಿಸಲಿರುವ ಗ್ಯಾರಂಟಿ ಯೋಜನೆ ಎಲ್ಲರಿಗೆ ಎಂದಿದ್ದ ಕಾಂಗ್ರೆಸ್ ಈಗ ಗ್ಯಾರಂಟಿ ಯೋಜನೆಯನ್ನು ಕಡಿತಗೊಳಿಸಲು ಫಲಾನುಭವಿಗಳಿಂದ ದಾಖಲೆ ಕೇಳಿ ಸತಾಯಿಸುತ್ತಿದೆ ಎಂದು ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ  ಗ್ಯಾರಂಟಿ ಯೋಜನೆ ಎಲ್ಲರಿಗೆ ಎಂದಿದ್ದರು. ಈಗ ಸಿಎಂ ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮಿ, ಭಾಗ್ಯ ಜ್ಯೋತಿ ಮುಂತಾದ ಯೋಜನೆಗಳಿಗೆ ಪಾನ್, ಆಧಾರ್, ರೇಶನ್ ಕಾರ್ಡ್, ಜಾತಿ, ಆದಾಯ ಪ್ರಮಾಣ ಪತ್ರವೇ ಮೊದಲಾದ ದಾಖಲೆಗಳನ್ನು ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಎಸ್‌ಐಆರ್ ದಾಖಲೆ ಪಡೆಯುವ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ದಾಖಲೆ ಒದಗಿಸುವುದರಲ್ಲೇ ಫಲಾನುಭವಿಗಳು ಹೈರಾಣಾಗುತ್ತಿದ್ದಾರೆ. ಈ ಮೂಲಕ ಯೋಜನೆಯನ್ನೇ ಸ್ಥಗಿತಗೊಳಿಸುವ ಹುನ್ನಾರ ಸರ್ಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲ ವೇತನಗಳಿಗೆ ಆದಾಯ ಮಿತಿಯನ್ನು 32 ಸಾವಿರ ರು. ಎಂದು ನಿಗದಿಪಡಿಸಲಾಗಿದೆ. ಆದಾಯ

ದೃಢೀಕರಣ ಪತ್ರಕ್ಕಾಗಿ ಈ ಜೀವಗಳು ಕಚೇರಿಗಳಿಗೆ ಅಲೆದಾಟ ನಡೆಸಬೇಕಾಗಿದೆ. ಇದರಿಂದ ಅನೇಕ ಮಂದಿ ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಆದಾಯ ಮಿತಿಯನ್ನು 3 ಲಕ್ಷ ರು.ಗೆ ಹೆಚ್ಚಳಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯವೈಖರಿ ನೋಡಿ ಜನತೆ ಬೇಸತ್ತಿದ್ದು, ಪರ್ಯಾಯ ಪಕ್ಷವಾಗಿ ಎಸ್‌ಡಿಪಿಐ ಬೆಂಬಲಿಸಲು ನಿರ್ಧರಿಸಿದ್ದಾರೆ. ಸ್ಥಳೀಯ ಸಂಸ್ಥೆ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಜನತೆ ಎಸ್‌ಡಿಪಿಐ ಬೆಂಬಲಿಸಲಿದ್ದಾರೆ. ಚುನಾವಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮಂಗಳೂರು ನಗರ ಹಾಗೂ ಗ್ರಾಮಾಂತರ ಎಲ್ಲ ಪ್ರದೇಶಗಳಲ್ಲಿ ಯಂಗ್ ಡೆಮಾಕ್ರಟಿಕ್ ಕಮಿಟಿ ರಚಿಸಲಿದ್ದು, ಮಂಗಳೂರಿನಲ್ಲಿ ಆ.12 ರಂದು ಸಮಾವೇಶ ಕೂಡ ನಡೆಯಲಿದೆ. ಈ ಸಮಾವೇಶದಲ್ಲಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳು ಇತ್ಯಾದಿ ವಿಚಾರಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

ಪಿಎಫ್‌ಐ ನಿಷೇಧಕ್ಕೂ ಎಸ್‌ಡಿಪಿಐಗೂ ಯಾವುದೇ ಸಂಬಂಧ ಇಲ್ಲ. ನಮ್ಮದು ರಾಜಕೀಯ ಪಕ್ಷ, ನಮ್ಮ ಅಜೆಂಡಾ ಗಮನಿಸಿ ಜನತೆ ಬೆಂಬಲ ನೀಡುತ್ತಿದೆ ಎಂದರು.

ರಾಜ್ಯ ಕಾರ್ಯದರ್ಶಿ ರಿಯಾಜ್ ಕಂಡಂಬು, ಜಮೀಲ್ ಜೋಕಟ್ಟೆ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article