ಮಂಗಳೂರಿನ ಕುಡ್ಲ ಕುಂದಾಪುರ ಫೌಂಡೇಶನ್
Sunday, August 9, 2026
ಮಂಗಳೂರು: ಮಂಗಳೂರಿನ ಕುಡ್ಲ ಕುಂದಾಪುರ ಫೌಂಡೇಶನ್‌ನ ಪಂಚಮ ಸಂಭ್ರಮದ ಕಾರ್ಯಕ್ರಮ ಉರ್ವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಗಸ್ಟ್ 9ರಂದು ಪ್ರಾರಂಭವಾಯಿತು.
ವಾಮಂಜೂರು ಕಾಯ ಕ್ಲಿನಿಕ್ ಮಂಜುನಾಥ ಎಸ್‌ಎಂರಿಂದ ರಕ್ತ ತಪಾಸಣಾ ಶಿಬಿರ, ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅವಿನ್ ಆಳ್ವ ಕೊಳ್ಕೆಬೈಲ್‌ರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಮಂಗಳೂರು ಪಾಂಡೇಶ್ವರ ದಕ್ಷಿಣ ಪೊಲೀಸ್ ಠಾಣೆಯ ನಿರೀಕ್ಷಕ ರಾಘವೇಂದ್ರ ಎಂ ಬೈಂದೂರು ಅವರು ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ವೈವಿಧ್ಯ ಆಟೋಟಗಳಾದ ಗೇರುಬೀಜ ಗುರಿ ಇಡುವುದು, ಚಮಚ ಲಿಂಬೆ ಓಟ, ಮಡಲು ನೇಯುವುದು, ತಲೆಯ ಮೇಲೆ ಲೋಟ ಇಟ್ಟು ಓಟ, ಒಂಟಿ ಕಾಲಿನ ಓಟ, ರಂಗೋಲಿ, ಬಲೂನು ಜೋಡಿ ಆಟ, ಗೋಲಿ ಗುರಿ ಇಡುವುದು ಇತ್ಯಾದಿ ನಡೆಯಿತು.