ಸಿಎಫ್‌ಎಎಲ್’: ವಿಶೇಷ ಗಣಿತ ಫಜಲ್ ಲೀಗ್ ಸ್ಪರ್ಧೆ

ಸಿಎಫ್‌ಎಎಲ್’: ವಿಶೇಷ ಗಣಿತ ಫಜಲ್ ಲೀಗ್ ಸ್ಪರ್ಧೆ

ಮಂಗಳೂರು: ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (ಸಿಎಫ್‌ಎಎಲ್) ವತಿಯಿಂದ 2026-27ನೇ ಶೈಕ್ಷಣಿಕ ಸಾಲಿನ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ‘ಸರ್ಚ್ ಫಾರ್ ದಿ ನೆಕ್ಸ್ಟ್ ರಾಮಾನುಜನ್’ ಎಂಬ 7 ಹಂತಗಳ ವಿಶೇಷ ಗಣಿತ ಫಜಲ್ ಲೀಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ವರ್ಷಪೂರ್ತಿ ನಡೆಯುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಶಾಲಾ ಪಠ್ಯಕ್ರಮ ಮೀರಿ ಗಣಿತದ ಸಮಸ್ಯೆಗಳನ್ನು ಬಿಡಿಸುವ ಕೌಶಲ್ಯ ಹಾಗೂ ತಾರ್ಕಿಕ ಆಲೋಚನಾ ಶಕ್ತಿಯನ್ನು ಹೆಚ್ಚಿಸಲು ನೆರವಾಗಲಿದೆ. ಭವಿಷ್ಯದಲ್ಲಿ ಒಲಿಂಪಿಯಾಡ್ ಮತ್ತು ಸ್ಟೆಮ್ ಶಿಕ್ಷಣದಲ್ಲಿ ಯಶಸ್ಸು ಸಾಽಸಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅಕಾಡೆಮಿಕ್ ಕೋ ಆರ್ಡಿನೇಟರ್ ಮಾನಸ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖವಾಗಿ ಎರಡು ವಿಭಾಗಗಳಲ್ಲಿ ಲೀಗ್ ನಡೆಯಲಿದ್ದು, ಜೂನಿಯರ್ ವಿಭಾಗ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಹಾಗೂ ಸೀನಿಯರ್ ವಿಭಾಗ 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಆ. 16, ಸೆ. 20, ಅ.18, ನ.15, ಡಿ. 20 ಮತ್ತು 2027ರ ಜ.17ರಂದು ಮಧ್ಯಾಹ್ನ 3.30ರಿಂದ ಸಂಜೆ 5.30 ರವರೆಗೆ ಬಿಜೈ ಸಿಎಫ್‌ಎಎಲ್ ಕ್ಯಾಂಪಸ್ನಲ್ಲಿ ಸ್ಪರ್ಧೆಗಳು ನಡೆಯಲಿದೆ. ಅತ್ಯುತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳಿಗೆ ‘ರಾಮಾನುಜನ್ ಪ್ರಶಸ್ತಿ’ ಮತ್ತು ‘ಹರೀಶ್-ಚಂದ್ರ ಪ್ರಶಸ್ತಿ’ ನೀಡಲಾಗುವುದು. ಒಟ್ಟು 7 ಹಂತಗಳಲ್ಲಿ ಕನಿಷ್ಠ 5 ಹಂತಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪುಸ್ತಕಗಳು, ನಗದು ಬಹುಮಾನ ಹಾಗೂ ನೋಂದಣಿ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು ಎಂದರು.

ಪಿಯು ವಿಭಾಗದ ಆಡಳಿತಾಽಕಾರಿ ಕ್ರಿಶ್ ಕ್ರಾಸ್ತಾ, ಕಾವ್ಯಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article