‘ಯೂತ್ ಆನ್ ವೀಕೆಂಡ್ ಅಟ್ ಆಶ್ರಮ’: ರಥಬೀದಿ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗಿ

‘ಯೂತ್ ಆನ್ ವೀಕೆಂಡ್ ಅಟ್ ಆಶ್ರಮ’: ರಥಬೀದಿ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗಿ


ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ–ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂರು ಎನ್‌ಎಸ್‌ಎಸ್ ಘಟಕಗಳ ಸ್ವಯಂಸೇವಕರಿಗಾಗಿ ‘ಯೂತ್ ಆನ್ ವೀಕೆಂಡ್ ಅಟ್ ಆಶ್ರಮ’ (YouWA) ಎಂಬ ಒಂದು ದಿನದ ಶಿಬಿರ ಆಗಸ್ಟ್ 8ರಂದು ಮಂಗಳೂರಿನ ಮಂಗಳಾದೇವಿಯ ರಾಮಕೃಷ್ಣ ಮಿಷನ್ ನಲ್ಲಿ ನಡೆಯಿತು.


ಶಿಬಿರದಲ್ಲಿ ಮೂರು ಎನ್‌ಎಸ್‌ಎಸ್ ಘಟಕಗಳಿಂದ ಒಟ್ಟು 52 ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿದರು. 

ಸ್ವಯಂಸೇವಕರಲ್ಲಿ ಸೇವೆ, ಶಿಸ್ತು, ತಂಡಭಾವನೆ, ನಾಯಕತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವು ನೋಂದಣಿಯೊಂದಿಗೆ ಆರಂಭಗೊಂಡು ನಂತರ ಆಶ್ರಮ ಪರಿಚಯ ಮತ್ತು ಮಾರ್ಗದರ್ಶನ ನಡೆಯಿತು. ರಾಮಕೃಷ್ಣ ಮಿಷನ್, ಮಂಗಳೂರಿನ ಕಾರ್ಯಕ್ರಮ ಸಂಯೋಜಕರಾದ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಸನತ್ ಕುಮಾರ್ ಅವರು ಸ್ವಯಂಸೇವಕರಿಗೆ ರಾಮಕೃಷ್ಣ ಮಿಷನ್‌ನ ಚಟುವಟಿಕೆಗಳು, ಧ್ಯೇಯಗಳು ಹಾಗೂ ಸೇವಾ ಕಾರ್ಯಗಳ ಕುರಿತು ಪರಿಚಯ ಮತ್ತು ಮಾರ್ಗದರ್ಶನ ನೀಡಿದರು.

ನಂತರ ಸ್ವಯಂಸೇವಕರು ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆಶ್ರಮದ ಪರಿಸರದ ಸ್ವಚ್ಛತೆ ಮತ್ತು ನಿರ್ವಹಣಾ ಕಾರ್ಯಗಳಲ್ಲಿ ಕೈಜೋಡಿಸುವ ಮೂಲಕ ಸೇವಾ ಮನೋಭಾವ ಮತ್ತು ಶ್ರಮದ ಗೌರವವನ್ನು ಅರಿತುಕೊಂಡರು.

ಇದಾದ ಬಳಿಕ ಟ್ರೆಷರ್ ಹಂಟ್ ಹಾಗೂ ವಿವಿಧ ತಂಡ ಚಟುವಟಿಕೆಗಳು ನಡೆದವು. ಚಟುವಟಿಕೆಗಳು ಸ್ವಯಂಸೇವಕರಲ್ಲಿ ಸಹಕಾರ, ಸಂವಹನ, ಸಮನ್ವಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾದವು.

ಮಧ್ಯಾಹ್ನ ಭಾರತೀಯ ಸೇನೆಯ ನಿವೃತ್ತ ಯೋಧ ಬೆಲ್ಲಾಳ ಗೋಪಿನಾಥ ರಾವ್ ಅವರು ಸ್ವಯಂಸೇವಕರೊಂದಿಗೆ ಸಂವಾದ ನಡೆಸಿದರು. ತಮ್ಮ ಸೇನಾ ಸೇವೆಯ ಅನುಭವಗಳನ್ನು ಹಂಚಿಕೊಂಡ ಅವರು ಶಿಸ್ತು, ಬದ್ಧತೆ, ಧೈರ್ಯ, ನಾಯಕತ್ವ ಹಾಗೂ ರಾಷ್ಟ್ರಸೇವೆಯ ಮಹತ್ವವನ್ನು ಒತ್ತಿಹೇಳಿದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ರಾಮಕೃಷ್ಣ ಮಠ, ಮಂಗಳೂರಿನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಅವರು ಉಪಸ್ಥಿತರಿದ್ದರು. ಸ್ವಯಂಸೇವಕರಾದ ಪ್ರೀತಮ್, ಹರ್ಣಿತಾ, ರಿತೇಶ್ ಹಾಗೂ ಅಕ್ಷಯ್ ಎಸ್. ಅವರು ಕಾರ್ಯಕ್ರಮದ ಕುರಿತು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಡಾ. ಮೋಹನದಾಸ್ ಹಾಗೂ ಶೋಭಾಮಣಿ ಉಪಸ್ಥಿತರಿದ್ದು, ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು.

‘ಯೂತ್ ಆನ್ ವೀಕೆಂಡ್ ಅಟ್ ಆಶ್ರಮ’ ಕಾರ್ಯಕ್ರಮವು ಸ್ವಯಂಸೇವಕರಿಗೆ ಸೇವೆ, ಶಿಸ್ತು, ತಂಡಭಾವನೆ, ನಾಯಕತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮೌಲ್ಯಗಳನ್ನು ಅನುಭವದ ಮೂಲಕ ಕಲಿಯಲು ಉತ್ತಮ ಅವಕಾಶವನ್ನು ಒದಗಿಸಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article