ತೋಡಾರು ಯೆನೆಪೋಯ ತಾಂತ್ರಿಕ ವಿದ್ಯಾಲಯದ 2022–26ರ ಬ್ಯಾಚ್‌ನ ಬಿ.ಇ. ಯ ವಿವಿಧ ವಿಭಾಗಗಳ 400 ವಿದ್ಯಾಥಿ೯ಗಳಿಗೆ  ಪದವಿ ಪ್ರದಾನ

ತೋಡಾರು ಯೆನೆಪೋಯ ತಾಂತ್ರಿಕ ವಿದ್ಯಾಲಯದ 2022–26ರ ಬ್ಯಾಚ್‌ನ ಬಿ.ಇ. ಯ ವಿವಿಧ ವಿಭಾಗಗಳ 400 ವಿದ್ಯಾಥಿ೯ಗಳಿಗೆ ಪದವಿ ಪ್ರದಾನ


ಮೂಡುಬಿದಿರೆ: ಪದವೀಧರರ ದಿನಾಚರಣೆಯ ಅಂಗವಾಗಿ ತೋಡಾರಿನ ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2022–26ರ ಬ್ಯಾಚ್‌ನ ಬಿ.ಇ.ಯ ವಿವಿಧ 7 ವಿಭಾಗಗಳ ಒಟ್ಟು 400 ವಿದ್ಯಾಥಿ೯ಗಳಿಗೆ ಶನಿವಾರ ಪದವಿ ಪ್ರದಾನ ಮಾಡಲಾಯಿತು.


ಮಣಿಪಾಲದ 'ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್'ನ ಸಿಇಒ ರತ್ನಾಕರ್ ಭಟ್ ಅವರು ಪದವಿ ಪ್ರದಾನ ಮಾಡಿ ಮಾತನಾಡಿ  ಯಶಸ್ಸನ್ನು ಸಾಧಿಸಲು ಪರಿಶ್ರಮ, ಕಾರ್ಯಕ್ಷಮತೆ ಮತ್ತು ತಾಳ್ಮೆ ಎಂಬ ಮೂರು ವಿಷಯಗಳು ಅಗತ್ಯವಾಗಿ ಬೇಕು. ಪದವಿಯ ನಂತರ ತಮ್ಮ ಪೋಷಕರನ್ನು ನೋಡಿಕೊಳ್ಳುವುದು ಮತ್ತು ಅವರಿಗೆ ಬೆಂಬಲ ನೀಡುವುದು ತಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿರಬೇಕು.  


ಪದವೀಧರ ವಿದ್ಯಾಥಿ೯ಗಳು ಮುಂದೆಯೂ ಸಂಸ್ಥೆಗೆ ಭೇಟಿ ನೀಡಿ ಕಿರಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಅವರಿಗೆ ಮಾರ್ಗದರ್ಶನ ನೀಡುವ ಮೂಲಕ ತಮ್ಮ ವಿದ್ಯಾಸಂಸ್ಥೆಯೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.  

ಬೆಂಗಳೂರಿನ 'ಐವೇವ್ ಸಿಸ್ಟಮ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್'ನ ಸ್ಥಾಪಕ-ಅಧ್ಯಕ್ಷರಾದ  ಅಬ್ದುಲ್ಲಾ ಖಾನ್ ಎಂ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಸಾಮರ್ಥ್ಯ, ವಿಶೇಷ ಪ್ರತಿಭೆ,  ಮತ್ತು ಕೌಶಲಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿರುತ್ತಾರೆ. ವೃತ್ತಿಪರ ಮತ್ತು ಶೈಕ್ಷಣಿಕ ಜವಾಬ್ದಾರಿಗಳ ಜೊತೆಗೆ ಆತಂಕ, ಒತ್ತಡ ಮತ್ತು ಇತರ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವೇಗವಾಗಿ ಬದಲಾಗುತ್ತಿರುವ ತಾಂತ್ರಿಕ ಪರಿಸರದಲ್ಲಿ ಪ್ರಸ್ತುತವಾಗಿ ಮತ್ತು ಯಶಸ್ವಿಯಾಗಿ ಉಳಿಯಲು ನಿರಂತರ ಕಲಿಕೆ, ವೃತ್ತಿಪರ ಶ್ರೇಷ್ಠತೆ, ನೈತಿಕ ಮೌಲ್ಯಗಳು ಮತ್ತು ಹೊಂದಿಕೊಳ್ಳುವಿಕೆಯ ಮಹತ್ವವನ್ನು ತಿಳಿಸಿದ ಅವರು  ಸ್ಪರ್ಧಾತ್ಮಕ ಮತ್ತು ಕೃತಕ ಬುದ್ಧಿಮತ್ತೆ  ಆಧಾರಿತ ಜಗತ್ತಿನಲ್ಲಿ, ಪದವೀಧರರು ತಮ್ಮ ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳಲು,  ಅವಕಾಶದ ಕ್ಷೇತ್ರಗಳನ್ನು ಅರಿಯಲು ಮತ್ತು ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ತಾವು ತಲುಪಲು ಬಯಸುವ ಗುರಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿಕೊಳ್ಳುವಂತೆ ತಿಳಿಸಿದರು.  

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ  ಪ್ರಶಾಂತ್ ಅವರು 9.78 ರ ಅತ್ಯುತ್ತಮ ಸಿಜಿಪಿಎ ಗಳಿಸುವ ಮೂಲಕ 2022–26ರ ಬ್ಯಾಚ್‌ನಲ್ಲಿ ವೈ. ಐ. ಟಿ ಯ ಅಗ್ರಗಣ್ಯ ವಿದ್ಯಾರ್ಥಿಯಾಗಿ  ಹೊರಹೊಮ್ಮಿದರು. ವೈ. ಐ ಟಿ ಯ 2022–26ರ ಬ್ಯಾಚ್‌ನ 'ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ' ಪ್ರಶಸ್ತಿಯನ್ನು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಕುಮಾರಿ ನಿತ್ಯಾ ಅವರಿಗೆ ಅವರ ಅತ್ಯುತ್ತಮ ಸಮಗ್ರ ಸಾಧನೆಯನ್ನು ಪರಿಗಣಿಸಿ ಪ್ರದಾನ ಮಾಡಲಾಯಿತು.

ಮಂಗಳೂರಿನ ಯೆನೆಪೊಯ ಗ್ರೂಪ್‌ನ ಕಾರ್ಯಾಚರಣೆ ನಿರ್ದೇಶಕರಾದ  ಯೆನೆಪೊಯ ಅಬ್ದುಲ್ಲಾ ಜಾವೆದ್ ಅವರು  ಅಧ್ಯಕ್ಷತೆ ವಹಿಸಿ ಪದವಿ ಸ್ವೀಕಾರದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 

ಈ ಸಮಾರಂಭದಲ್ಲಿ ಯೆನೆಪೋಯ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಮಂಗಳೂರಿನ ಸಹ-ಕುಲಾಧಿಪತಿ  ಯೆನೆಪೊಯ ಮೊಹಮ್ಮದ್ ಫರ್ಹಾದ್,  ಆಡಳಿತ ಮಂಡಳಿ ಸದಸ್ಯ ಡಾ. ಅಖ್ತರ್ ಹುಸೇನ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ಡಾ. ಮೆಲ್ವಿನ್ ಡಿ'ಸೋಜಾ, ಸಂಶೋಧನಾ ವಿಭಾಗದ ಡೀನ್ ಪ್ರೊ. ಡಾ. ಸುಜರಿತಾ,  ಕ್ಯಾಂಪಸ್ ಆಡಳಿತಾಧಿಕಾರಿ  ಮೊಹಮ್ಮದ್ ಬಿ. ಶಾಹಿದ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ವೈ.ಐ.ಟಿ ಯ ಪ್ರಾಂಶುಪಾಲ ಪ್ರೊ. ಡಾ. ಅಬ್ದುಲ್ ಕರೀಮ್  ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಕುಮಾರಿ ಸಿಂಚನ ಅವರು ಕಾರ್ಯಕ್ರಮ ನಿರೂಪಿಸಿದರು.  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ  ಕಾರ್ತಿಕ್ ಮತ್ತು  ಡಯಾನಾ ಅವರು ಅತಿಥಿಗಳನ್ನು ಪರಿಚಯಿಸಿದರು. 

ಸಿಎಸ್‌ಇ-ಡೇಟಾ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article