ನೀರು ಸರಬರಾಜು ವ್ಯತ್ಯಯ
ಮಂಗಳೂರು: ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟೆಯ ಪಂಪ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವುದರಿಂದ ಸುರತ್ಕಲ್ ಭಾಗದ ವಾರ್ಡ್‌ಗಳಿಗೆ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದಕ್ಷಿಣದ ತಗ್ಗು ಪ್ರದೇಶಗಳಿಗೆ ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆಯ ಉಪ ಆಯುಕ್ತರು ತಿಳಿಸಿದ್ದಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ತುಂಬೆ ಅಣೆಕಟ್ಟೆಯ ಜಾಕ್ವೆಲ್‌ನ ಇನ್ಟೇಕ್ ಭಾಗದಲ್ಲಿ ಮರದ ದಿಮ್ಮಿ, ಕೊಂಬೆ, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ, ಚೀಲ ಮತ್ತು ಹೂಳು ಸಂಗ್ರಹಗೊಂಡಿದೆ. ಇದರಿಂದ ಪಂಪ್ನ ಸ್ಟೇನರ್ಗೆ ಹಾನಿಯಾಗಿ ಮುಚ್ಚಿಹೋಗಿದೆ. ಇದು ಪಂಪಿಂಗ್ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎಂದು ಅವರು ಸೋಮವಾರ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಂಗ್ರಹಗೊಂಡಿರುವ ತ್ಯಾಜ್ಯ ತೆರವುಗೊಳಿಸಿ ಸ್ಟೇನರ್ ದುರಸ್ತಿ ಮಾಡಿ ಪಂಪಿಂಗ್ ವ್ಯವಸ್ಥೆ ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನ ನಡೆಯುತ್ತಿದೆ. ಈಗ ಪೂರ್ಣ ಸಾಮರ್ಥ್ಯದಲ್ಲಿ ನೀರು ಪಂಪ್ ಮಾಡಲು ಆಗುತ್ತಿಲ್ಲ. ಆದ್ದರಿಂದ ಆ.೩೧ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗ ಲಿದೆ. ಸಾರ್ವಜನಿಕರು ಮಿತ ಬಳಕೆ ಮೂಲಕ ಪರಿಸ್ಥಿತಿಗೆ ಹೊಂದಿ ಕೊಳ್ಳ ಬೇಕು ಎಂದು ಅವರು ಹೇಳಿದ್ದಾರೆ.