ಪ್ರಯಾಣಿಕನ ಜೀವ ಉಳಿಸಿದ ಪಾಯಿಂಟ್ ಮ್ಯಾನ್
Tuesday, August 11, 2026
ಮಂಗಳೂರು: ಚಲಿಸುತ್ತಿದ್ದ ರೈಲನ್ನೇರಲು ಹೋಗಿ ಅಸಹಾಯಕವಾಗಿ ಬೋಗಿ ಹಾಗೂ ಪ್ಲಾಟ್‌ಫಾರ್ಮ್ ನಡುವಿನ ಗ್ಯಾಪ್‌ಗೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಸಮಯಕ್ಕೆ ಸರಿಯಾಗಿ ಎಳೆದು ಪ್ರಾಣ ಉಳಿಸಿದ ರೋಮಾಂಚನಕಾರಿ ಘಟನೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಸುಧಾ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
ಸಾಹಸ ಮೆರೆದು ಪ್ರಯಾಣಿಕನ ಜೀವ ಉಳಿಸಿದ ಸುರತ್ಕಲ್ ನಿಲ್ದಾಣದ ಕರ್ತವ್ಯನಿರತ ಪಾಯಿಂಟ್ ಮ್ಯಾನ್ ಸಂದೀಪ್ ನಾಯಕ್ ಅವರ ಈ ಜಾಗರೂಕತೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಸಂದೀಪ್ ನಾಯಕ್ ಅವರ ಕಟಿಬದ್ಧತೆ ಹಾಗೂ ಧೈರ್ಯವನ್ನು ಶ್ಲಾಘಿಸಿರುವ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು, ಸಂದೀಪ್ ಅವರಿಗೆ 10,000 ರೂಪಾಯಿ ನಗದು ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.