ಭಾರತ್ ಜೋಡೋ ಯುವ ಸಂಘ ನೋಂದಣಿ ಪ್ರಕ್ರಿಯೆ ಚುರುಕಿಗೆ ಸೂಚನೆ

ಭಾರತ್ ಜೋಡೋ ಯುವ ಸಂಘ ನೋಂದಣಿ ಪ್ರಕ್ರಿಯೆ ಚುರುಕಿಗೆ ಸೂಚನೆ


ಮಂಗಳೂರು: ಭಾರತ್ ಜೋಡೋ ಯುವ ಸಂಘ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ನಿರಂತರವಾಗಿ ಅನುಸರಣೆ ಮಾಡುವಂತೆ ಮಂಗಳೂರು ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಸೂಚನೆ ನೀಡಿದ್ದಾರೆ. 

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ನಡೆದ ಭಾರತ್ ಜೋಡೋ ಯುವ ಸಂಘ (DM-UÀR) ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವಿಶೇಷವಾಗಿ ಯುವಜನರಿಗೆ ಯೋಜನೆಯ ಪ್ರಯೋಜನಗಳ ಕುರಿತು ಸೂಕ್ತ ಮಾಹಿತಿ ನೀಡಿ ಜಾಗೃತಿ ಮೂಡಿಸು ವಂತೆ ನಿರ್ದೇಶಿಸಿದ ಅವರು ಯೋಜನೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಪಾಲಿಕೆಯ ಮಾಜಿ ಸದಸ್ಯರನ್ನು ಸಂಪರ್ಕಿಸುವಂತೆ ಹಾಗೂ 18 ವರ್ಷ ಪ್ರಾಯ ಮೇಲ್ಪಟ್ಟ ಯುವಕರನ್ನು ಗುರುತಿಸಿ ಅವರನ್ನು ನೋಂದಣಿ ಪ್ರಕ್ರಿಯೆ ಯಲ್ಲಿ ತೊಡಗಿಸಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳ (DO) ಸಹಕಾರದೊಂದಿಗೆ ಮತದಾರರ ಪಟ್ಟಿಯನ್ನು ಪಡೆಯುವಂತೆ ಹೇಳಿದರು. 

ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಸಲಹೆಗಳನ್ನು ಪಡೆಯುವ ಸಂದರ್ಭ ಡಿಡಿಪಿಐ, ಡಿಡಿಪಿಯು, ಪದವಿ ಕಾಲೇಜುಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸುವುದರಿಂದ ನೋಂದಣಿ ಪ್ರಕ್ರಿಯೆ ಸುಗಮವಾಗಲಿದೆ ಎಂದು ಅಧಿಕಾರಿಯೊಬ್ಬರು ಸಲಹೆ ನೀಡಿದರು. ಇದಕ್ಕೆ ಸಮ್ಮತಿಸಿದ ಆಯುಕ್ತರು, ಸುತ್ತೋಲೆ ಸಿದ್ಧಪಡಿಸಿ ಹೊರಡಿಸುವಂತೆ ತಿಳಿಸಿದರಲ್ಲದೆ ಯೋಜನೆಯ ಅನುಷ್ಠಾನದಲ್ಲಿ ಶಿಕ್ಷಣ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಸರಕಾರದ ನಿರ್ದೇಶನದಂತೆ ಅಂತಿಮ ನೋಂದಣಿ ಪ್ರಕ್ರಿಯೆ ಆ.31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಯಿರುವ ಹಿನ್ನೆಲೆಯಲ್ಲಿ, ನಿಗದಿತ ಅವಧಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸುವಂತೆ ಆಯುಕ್ತರು ಕರೆ ನೀಡಿದರು.

ಪಾಲಿಕೆಯ ನಗರ ಯೋಜನೆ, ಆರೋಗ್ಯ, ಇಂಜಿನಿಯರಿಂಗ್ ಸಹಿತ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article