ಚೀನಾ ವಿರುದ್ಧ ಟಿಬೆಟನ್ನರ ಪ್ರತಿಭಟನೆ

ಚೀನಾ ವಿರುದ್ಧ ಟಿಬೆಟನ್ನರ ಪ್ರತಿಭಟನೆ


ಮಂಗಳೂರು: ಟಿಬೆಟನ್ನರ ಸಾರ್ವಭೌಮತ್ವವನ್ನು ಉಳಿಸಬೇಕು ಮತ್ತು ಚೀನಾದ ದಮನಕಾರಿ ನೀತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಟಿಬೆಟನ್ ಯೂತ್ ಕಾಂಗ್ರೆಸ್ ಸದಸ್ಯರು ನಗರದಲ್ಲಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಧರ್ಮಶಾಲಾದಲ್ಲಿ ಆರಂಭಗೊಂಡ ಜಾಗತಿಕ ಮಟ್ಟದ ಪ್ರತಿಭಟನಾ ಸರಣಿಯ ಭಾಗವಾಗಿ ಮಂಗಳೂರಿನಲ್ಲಿ ಬೀದಿಗಿಳಿದ ಸದಸ್ಯರು ಚೀನಾ ಆಕ್ರಮಿತ ಟಿಬೆಟ್ನಲ್ಲಿ ಸ್ವಾತಂತ್ರ್ಯ ನೀಡಲು ಮತ್ತು ಟಿಬೆಟನ್ನರ ಹಕ್ಕುಗಳನ್ನು ಸಂರಕ್ಷಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮುಂದೆ ಆತ್ಮಾಹುತಿ ಮಾಡಿಕೊಂಡ ಟಿಬೆಟನ್ ಹಕ್ಕುಗಳ ಕಾರ್ಯಕರ್ತ ಲೊಬ್ಗ ರಂಗ್ಜೆನ್ ಅವರ ಕುರಿತು ವಿಶ್ವಸಂಸ್ಥೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕು ಎಂದೂ ಒತ್ತಾಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article