ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆ 2026: ಆಳ್ವಾಸ್ ಶಾಲೆಯ 4 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆ 2026: ಆಳ್ವಾಸ್ ಶಾಲೆಯ 4 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ


ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು ಹಾಗೂ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಲೇಡಿಹಿಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 3 ಚಿನ್ನ, 6 ಬೆಳ್ಳಿ ಹಾಗೂ 3 ಕಂಚು ಒಟ್ಟು 12 ಪದಕಗಳನ್ನು ಪಡೆದುಕೊಂಡು 4 ವಿದ್ಯಾರ್ಥಿಗಳು ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಫಲಿತಾಂಶ:

14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಪ್ರೀತಿ 400ಮೀ ಫ್ರೀಸ್ಟೈಲ್ (ಪ್ರಥಮ), 200ಮೀ ಐಎಂ  (ದ್ವಿತೀಯ), 50ಮೀ ಫ್ರೀಸ್ಟೈಲ್ (ದ್ವಿತೀಯ),

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಭಿಷೇಕ್ 200ಮೀ  ಫ್ರೀಸ್ಟೈಲ್ (ಪ್ರಥಮ), 50ಮೀ ಬಟರ್ ಫ್ಲೈ(ದ್ವಿತೀಯ), 400ಮೀ ಐಎಂ  (ಪ್ರಥಮ), ದುರ್ಗೇಶ್ 50ಮೀ ಬ್ರಿಸ್ಟ್ ಸ್ಟ್ರೋಕ್(ತೃತೀಯ), 200ಮೀ ಐಎಂ (ದ್ವಿತೀಯ), 50ಮೀ ಫ್ರೀಸ್ಟೈಲ್ (ತೃತೀಯ), ರಿತ್ವಿಜ್ ರಿತ್ವಿಜ್ 100ಮೀ ಫ್ರೀಸ್ಟೈಲ್  (ದ್ವಿತೀಯ), 50 ಮೀ ಬ್ಯಾಕ್‌ಸ್ಟ್ರೋಕ್ (ತೃತೀಯ), 50 ಮೀ ಫ್ರೀಸ್ಟೈಲ್  (ದ್ವಿತೀಯ) ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article