ಅಖಂಡ ಭಾರತ ಸಂಕಲ್ಪ ದಿನ: ಆ. 14ರಂದು ಮೂಡುಬಿದಿರೆ ವಿಹಿಂಪ -ಬಜರಂಗದಳದಿಂದ ಪಂಜಿನ ಮೆರವಣಿಗೆ
Thursday, August 13, 2026
ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಮೂಡುಬಿದಿರೆ ತಾಲೂಕು ವಿಹಿಂಪ ಮತ್ತು ಬಜರಂಗದಳದಿಂದ ಶುಕ್ರವಾರ ಸಂಜೆ (ಆ. 14) 6.30ಕ್ಕೆ ಸಾವಿರ ಕಂಬದ ಬಸದಿಯಿಂದ ಮೂಡುಬಿದಿರೆ ಸಮಾಜ ಮಂದಿರದವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಬಜರಂಗದಳದ ಪ್ರಕಟನೆ ತಿಳಿಸಿದೆ.
ನಂತರ ಸಮಾಜ ಮಂದಿರದಲ್ಲಿ ನಡೆಯುವ ಸಭಾ ಕಾಯ೯ಕ್ರಮದಲ್ಲಿ ವಿಹಿಂಪದ ವಿಭಾಗ ವಿಶೇಷ ಸಂಪಕ೯ ಪ್ರಮುಖ್ ದೇವಿಪ್ರಸಾದ್ ಶೆಟ್ಟಿ ಮತ್ತು ನಿವೃತ್ತ ಪೊಲೀಸ್ ಉಪ ನಿರೀಕ್ಷಕ ರಾಜಾರಾಮ್ ನಾಗರಕಟ್ಟೆ ಭಾಗವಹಿಸಲಿದ್ದಾರೆಂದರು ಸಂಘಟಕರು ತಿಳಿಸಿದ್ದಾರೆ.