ಮೂಡುಬಿದಿರೆ ಎಎ ಕೂಟದ 35ನೇ ವಾರ್ಷಿಕೋತ್ಸವ

ಮೂಡುಬಿದಿರೆ ಎಎ ಕೂಟದ 35ನೇ ವಾರ್ಷಿಕೋತ್ಸವ

ಅಮಲಿನಿಂದ ಹೊರ ಬರುವವರಿಗೆ ಸಮಾಜ ಬೆಂಬಲ ನೀಡಬೇಕು: ಧಮ೯ಗುರು ಓನಿಲ್ ಡಿ'ಸೋಜಾ


ಮೂಡುಬಿದಿರೆ: ಅಲ್ಕೋಹಾಲಿಕ್ಸ್ ಅನಾನಿಸಮ್ (ಎಎ)ಮೂಡುಬಿದಿರೆ ಕೂಟದ 35ನೇ ವಷ೯ದ ವಾಷಿ೯ಕೋತ್ಸವವು ಭಾನುವಾರ ಹೋಲಿ ರೋಜರಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. 

ಮೂಡುಬಿದಿರೆ ಕ್ರಿಸ್ತಿ ಕೋಪು೯ಸ್ ಚಚ್೯ನ ಧಮ೯ಗುರು ಓನಿಲ್ ಡಿ'ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಒಂದು ಕುಟುಂಬದಲ್ಲಿ ಓವ೯ ವ್ಯಕ್ತಿ ಅಮಲು ಸೇವನೆ ಮಾಡುವವನಿದ್ದರೆ ಆ ಕುಟುಂಬವೇ ಹಾಳಾಗುತ್ತದೆ ಆದರೆ ಅದೇ ವ್ಯಕ್ತಿ ಅಮಲು ಸೇವನೆಯಿಂದ  ಹೊರಬಂದಾಗ ಆ ಇಡೀ ಕುಟುಂಬಕ್ಕೆ ಹೊಸ ಜೀವ ಸಿಕ್ಕಂತ್ತಾಗುತ್ತದೆ ಆದ್ದರಿಂದ ಅಮಲಿನಿಂದ ಹೊರಬರಲು ಪ್ರಯತ್ನಿಸುವ ವ್ಯಕ್ತಿಗಳಿಗೆ ಸಮಾಜ ಬೆಂಬಲ ನೀಡಬೇಕು ಎಂದು ಮೂಡುಬಿದಿರೆ ಚರ್ಚಿನ ಧರ್ಮಗುರು ರೆ.ಫಾ. ಒನಿಲ್ ಡಿಸೋಜ ಹೇಳಿದರು.

ಮೂಡುಬಿದಿರೆಯ ಹೋಲಿ ರೋಜರಿ ಹೈಸ್ಕೂಲ್ ಅಮಲು ಹಲವು ರೂಪಗಳಲ್ಲಿ ವ್ಯಕ್ತಿಯನ್ನು ಆಕರ್ಷಿಸಬಹುದು. ಸ್ನೇಹಿತರು, ಪರಿಚಿತರು ಹಾಗೂ ಹಬ್ಬದ ಸಂದರ್ಭಗಳಲ್ಲಿ ದೊರೆಯುವ ಪ್ರೇರಣೆಯಿಂದಲೂ ವ್ಯಕ್ತಿಗಳು ಅದಕ್ಕೆ ಬಲಿಯಾಗುವ ಸಾಧ್ಯತೆಯಿದ್ದು, ಇದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.

35 ವರ್ಷಗಳ ಅಮಲುಮುಕ್ತ ಜೀವನ ಸಣ್ಣ ಸಾಧನೆಯಲ್ಲ. ‘ಇಂದು’ ಎಂಬ ತತ್ವದಡಿ ಪ್ರತಿದಿನ ಅಮಲಿನಿಂದ ದೂರವಿರುವ ಸಂಕಲ್ಪ ಮುಂದುವರಿಸುವುದೇ ಎ.ಎ.ಯ ವಿಶೇಷತೆ. ಸದಸ್ಯರು ಅನುಭವ ಹಂಚಿಕೊಂಡು ಪರಸ್ಪರ ಪ್ರೇರಣೆ ನೀಡುತ್ತಿದ್ದಾರೆ. ಅಮಲಿನಿಂದ ಹೊರಬರಲು ಪ್ರಯತ್ನಿಸುವವರಿಗೆ ಇದು ಪ್ರೇರಣೆಯಾಗಲಿ ಎಂದು ಆಶಿಸಿದರು.

ಮುಖ್ಯ ಶಿಕ್ಷಕಿ ಸಿಸ್ಟರ್ ಸುನೀತಾ ಮಾತನಾಡಿ, ಮದ್ಯವ್ಯಸನದಿಂದ ಜನರನ್ನು ಮುಕ್ತಗೊಳಿಸಿ ಕುಟುಂಬಗಳನ್ನು ರಕ್ಷಿಸುವಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್ ಸೇವೆ ಶ್ಲಾಘನೀಯ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ವಲೇರಿಯನ್ ಮೋರಸ್ ತಾಕೊಡೆ ಮಾತನಾಡಿ, ಸಂಸ್ಥೆಯ ತತ್ವಗಳು ನೂರಾರು ಮಂದಿಗೆ ಹೊಸ ಜೀವನ ನೀಡಿವೆ. ಸಂಸ್ಥಾಪಕರಾದ ಬಿಲ್ ಡಬ್ಲ್ಯು ಮತ್ತು ಡಾ. ಬಾಬ್ ಅವರ ಕೊಡುಗೆ ಅಪಾರ ಎಂದರು. ಎ.ಎ. ಬಾಂಧವ್ಯವನ್ನು ಇನ್ನಷ್ಟು ಬಲಪಡಿಸೋಣ ಎಂದು ಹೇಳಿದರು. 

ಕೂಟದ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article