ಮಾರೂರು ಶ್ರೀ ಗೋಪಾಲ ಕೃಷ್ಣ  ಕೊಡಾಮಣಿತ್ತಾಯ ದೇವಸ್ಥಾನಕ್ಕೆ ಧಮ೯ಸ್ಥಳದಿಂದ ರೂ. 5 ಲಕ್ಷ ಅನುದಾನ: ಮಂಜೂರಾತಿ ಪತ್ರ ಹಸ್ತಾಂತರ

ಮಾರೂರು ಶ್ರೀ ಗೋಪಾಲ ಕೃಷ್ಣ ಕೊಡಾಮಣಿತ್ತಾಯ ದೇವಸ್ಥಾನಕ್ಕೆ ಧಮ೯ಸ್ಥಳದಿಂದ ರೂ. 5 ಲಕ್ಷ ಅನುದಾನ: ಮಂಜೂರಾತಿ ಪತ್ರ ಹಸ್ತಾಂತರ


ಮೂಡುಬಿದಿರೆ: ತಾಲೂಕಿನ ಶ್ರೀ ಗೋಪಾಲ ಕೃಷ್ಣ  ಕೊಡಾಮಣಿತ್ತಾಯ ದೇವಸ್ಥಾನ ಮಾರೂರು - ಹೊಸಂಗಡಿ  ದೇವಸ್ಥಾನದ  ಜೀರ್ಣೋದ್ಧಾರದ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅವರು ಮಂಜೂರು ಮಾಡಿರುವ ರೂಪಾಯಿ 5 ಲಕ್ಷ ಅನುದಾನದ ಮಂಜೂರಾತಿ ಪತ್ರವನ್ನು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ. ಕ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ಅವರು  ದೇವಸ್ಥಾನದ   ಸಮಿತಿಯ  ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಗುರುವಾರ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ದೇವಾ ಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ಹೊಸಂಗಡಿ ಅರಮನೆಯ  ಸುಕುಮಾರ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಂಭು ಎನ್ ಶೆಟ್ಟಿ  ಮಾರೂರು ಗುತ್ತು,  ಅರ್ಚಕರಾದ ವೆಂಕಟರಾಜು,  ಸುಧಾಕರ್  ಶೆಟ್ಟಿ, ಸುಶಾಂತ್ ಕರ್ಕೇರ, ಯೋಜನಾಧಿಕಾರಿ ಧನಂಜಯ, ಮೇಲ್ವಿಚಾರಕಿ  ಸರಸ್ವತಿ, ಒಕ್ಕೂಟದ ಪದಾಧಿಕಾರಿ ರತ್ನಾಕರ ಶೆಟ್ಟಿ, ಒಕ್ಕೂಟದ ವಲಯ ಅಧ್ಯಕ್ಷ ಅರುಣ್, ಸೇವಾಪ್ರತಿನಿಧಿ ಸೌಮ್ಯ, ಜಗದೀಶ್ ಆಚಾರ್ಯ, ದಿನೇಶ್ ಮಾರೂರು, ಕೇಶವ ಆಚಾರ್ಯ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article