63ನೇ ವಷ೯ದ ಮೂಡುಬಿದಿರೆ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

63ನೇ ವಷ೯ದ ಮೂಡುಬಿದಿರೆ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


ಮೂಡುಬಿದಿರೆ: ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ಇದರ ವತಿಯಿಂದ ಸೆ.14 -18ರ ವರೆಗೆ ನಡೆಯುವ 63ನೇ ವಷ೯ದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾಯ೯ಕ್ರಮವು ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆಯಿತು.

ಸ್ತ್ರೀರೋಗ ತಜ್ಞ ಡಾ. ರಮೇಶ್ ಹಾಗೂ ಉದ್ಯಮಿ ಜಯರಾಮ್ ಕೋಟ್ಯಾನ್ ಅವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು  ಬಿಡುಗಡೆಗೊಳಿಸಿದರು.

ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ., ಚೌಟರ ಅರಮನೆಯ ಕುಲದೀಪ್ ಎಂ., ಪುತ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ., ಕಾಯ೯ದಶಿ೯ ಗಂಗಾಧರ ಎಂ., ಉಪಾಧ್ಯಕ್ಷರುಗಳಾದ ರಾಜರಾಮ್ ನಾಗರಕಟ್ಟೆ, ಕೊರಗ ಶೆಟ್ಟಿ, ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಲಕ್ಷ್ಮಣ ಪೂಜಾರಿ, ನವೀನ್ ಚಂದ್ರ ಕರ್ಕೇರ, ಚೇತನ್ ಪೇಟೆಮನೆ,   ಹಾಗೂ ಪ್ರಸನ್ನ ವಿ. ಶೆಣೈ, ಪ್ರಶಾಂತ್ ಭಂಡಾರಿ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article