80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಕಿನ್ನಿಗೋಳಿಯಲ್ಲಿ ಬೃಹತ್ ತಿರಂಗಾ ಯಾತ್ರೆ

80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಕಿನ್ನಿಗೋಳಿಯಲ್ಲಿ ಬೃಹತ್ ತಿರಂಗಾ ಯಾತ್ರೆ


ಮೂಡುಬಿದಿರೆ: ತಿರಂಗಾ ಯಾತ್ರೆ ಆಯೋಜನಾ ಸಮಿತಿ  ಮೂಲ್ಕಿ ಮೂಡಬಿದಿರೆ ಇದರ ಆಶ್ರಯದಲ್ಲಿ  80ನೇ ವರ್ಷದ  ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಿಂದ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಿತು. 


ಬಿಜೆಪಿ ನಾಯಕ ಪುಣ್ಯ ಪಾಲ್  ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೆಷ್ಟೋ ಜನ ತರುಣರು ತಮ್ಮ  ತಾರುಣ್ಯವನ್ನೇ ಅರ್ಪಣೆ ಮಾಡಿದ್ದಾರೆ. ಸ್ವಾತಂತ್ಯದ ಆಚರಣೆ ಸಂಭ್ರಮ ಮಾತ್ರವಲ್ಲ ಅದು ನಮ್ಮ ಜವಾಬ್ದಾರಿಯಾಗಿರಲಿ, ದೇಶದ ಹೊರಗಿನ ಶತ್ರುಗಳನ್ನು ನಾವು ಎದುರಿಸಲು ಸಶಕ್ತವಾಗಿದ್ದೇವೆ, 2047 ರ ವಿಕಾಸಿತ ಬಾರತಕ್ಕೆ ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡೋಣ ಎಂದರು. 


ಹಿಂದೆ ಶಾಲಾ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರೆ,  ಮೋದಿಯವರು ಪ್ರಧಾನಿಯಾದ ನಂತರ ಸಾರ್ವಜನಿಕವಾಗಿ ಉಸ್ತ್ವವಾಗಿ ಆಚರಿಸಲು ಪ್ರಾರಂಭವಾಯಿತು. ಭಾರತದ ಮೇಲೆ ನಿರಂತರ ದಾಳಿ ಆದರೂ ನಾವು ಎದ್ದು ನಿಂತಿದ್ದೇವೆ, ನಮ್ಮ ದೌರ್ಬಲ್ಯದ ಕಾರಣ ನಾವು ಅದೆಷ್ಟೋ ಕಾಲ ಗುಲಾಮಗಿರಿಯಿಂದ ಇರಬೇಕಾಯಿತು ಎಂದು ಖೇಧ ವ್ಯಕ್ತಪಡಿಸಿದರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಭಾಗವಹಿಸಿ ಮಾತನಾಡಿ ನಮ್ಮ ದೇಶದ ಭವ್ಯ ಇತಿಹಾಸದ ಹಾಗೂ ರಾಷ್ಟ್ರದ ಏಕತೆ ಹಾಗೂ ನಾವು ಗಳಿಸಿದ ಸ್ವಾತಂತ್ರ್ಯ ವನ್ನು ದೊರಕಿಸಿಕೊಟ್ಟ ನಮ್ಮ ಹಿರಿಯರಿಗೆ ಮಹಾ ಚೇತನಗಳನ್ನು  ನಾವು ಒಮ್ಮೆ ನೆನಪಸಿಕೊಂಡು ಅವರ ಗೌರವ ಕೊಡಬೇಕು ಹಾಗೂ ಪ್ರತಿ ಮನೆ ಪ್ರತಿ ಹೃದಯದಲ್ಲಿ  ತಿರಂಗದ ಗೌರವನ್ನು ಎತ್ತಿ ಹಿಡಿಯೋಣ   ಎಂದು ಹೇಳಿದರು. 

ಮಂಡಲ ಅಧ್ಯಕ್ಷ  ದಿನೇಶ್ ಪುತ್ರನ್ ಜಿಲ್ಲಾ  ಉಪಾಧ್ಯಕ್ಷ   ಸುನೀಲ್ ಆಳ್ವ, ಅಭಿಲಾಷ್ ಶೆಟ್ಟಿ ಕಟೀಲು, ಗುರುರಾಜ್ ಮಲ್ಲಿಗೆಯಂಗಡಿ, ಲೋಕೇಶ್ ಬಜಪೆ, ಈಶ್ವರ್ ಕಟೀಲು, ಶಾಂತಿಪ್ರಸಾದ್ ಹೆಗ್ಡೆ ವಿನೋದ್ ಬೊಳ್ಳೂರು, ರಂಜಿತ್ ಶೆಟ್ಟಿ ತೋಡಾರು,   ಹಾಗೂ ವಿವಿಧ ನಾಯಕರು  ಉಪಸ್ಥಿರಿದ್ದರು. 

ವಿನೋದ್ ಸಾಲ್ಯಾನ್ ಬೆಳ್ಮಾಯರು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article