ಗ್ರಂಥಪಾಲಕರ ದಿನಾಚರಣೆ: ಮೂಡುಬಿದಿರೆ ಗ್ರಂಥಾಲಯದಲ್ಲಿ ಪುಸ್ತಕ ಪ್ರದಶ೯ನ
Wednesday, August 12, 2026
ಮೂಡುಬಿದಿರೆ: ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ಮಂಗಳೂರು ಇದರ ಶಾಖಾ ಗ್ರಂಥಾಲಯ ಮೂಡುಬಿದಿರೆಯಲ್ಲಿ ಬುಧವಾರ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಗ್ರಂಥಾಲಯದ ಹಿರಿಯ ಓದುಗರಾದ ಗೋವಿಂದ ಆರ್. ಅವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಗ್ರಂಥಾಲಯದ ಓದುಗರಾಗಿರುವ ಶೇಖರ್ ಹೆಗ್ಡೆ, ಸೀನ ಎಂ , ನೀತಾ ಹಾಗೂ ಇತರ ಗ್ರಂಥಾಲಯ ಓದುಗರು ಮತ್ತು ವಿದ್ಯಾರ್ಥಿಗಳು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.
