ಮೂಡುಬಿದಿರೆಯಲ್ಲಿ ಪಾಲೆಕೆತ್ತೆ ಕಷಾಯ ವಿತರಣೆ

ಮೂಡುಬಿದಿರೆಯಲ್ಲಿ ಪಾಲೆಕೆತ್ತೆ ಕಷಾಯ ವಿತರಣೆ


ಮೂಡುಬಿದಿರೆ: ವಿಶ್ವ ತುಳುವೆರ್ ಸಂಘಟನೆ, ಮಂಗಳೂರು ಹಾಗೂ ಎಕ್ಸಲೆಂಟ್ ಪಿ.ಯು. ಕಾಲೇಜು ಕಲ್ಲಬೆಟ್ಟು ಇವುಗಳ ಜಂಟಿ ಸಹಯೋಗದಲ್ಲಿ ತುಳುನಾಡಿನ ಸಾಂಪ್ರದಾಯಿಕ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಪಾಲೆಕೆತ್ತೆ ಕಷಾಯ ವಿತರಣೆ ಬುಧವಾರ ಮುಂಜಾನೆ ಮೂಡುಬಿದಿರೆಯ ವಲಯ ಅರಣ್ಯಾಧಿಕಾರಿ ಕಚೇರಿ ರಸ್ತೆಯ ಛಾಯಾ ಕಂಪ್ಯೂಟರ್ ಕೇಂದ್ರದಲ್ಲಿ ನಡೆಯಿತು. 

ಸಂಘಟನೆಯ ದಯಾನಂದ ಹಾಗೂ ಬಳಗದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಪರಿಸರದ ನೂರಾರು ಮಂದಿ ಪಾಲೆಕೆತ್ತೆ ಕಷಾಯ ಹಾಗೂ ಮೆಂತೆಗಂಜಿಯನ್ನು ಪ್ರಸಾದ ರೂಪದಲ್ಲಿ ಸೇವಿಸಿದರು.

ತುಳುನಾಡಿನ ಸಾಂಪ್ರದಾಯಿಕ ಆಹಾರ ಮತ್ತು ಔಷಧೀಯ ಪದ್ಧತಿಗಳ ಪರಿಚಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಪಾಲೆಕೆತ್ತೆ ಕಷಾಯ ವಿತರಣೆ ಗಮನ ಸೆಳೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article