ಮೂಡುಬೆಳ್ಳೆ ವಿಶ್ವಹಿಂದೂ ಪರಿಷದ್‌ನಿಂದ ಆಂಬುಲೆನ್ಸ್ ಸೇವೆ ಲೋಕಾರ್ಪಣೆ

ಮೂಡುಬೆಳ್ಳೆ ವಿಶ್ವಹಿಂದೂ ಪರಿಷದ್‌ನಿಂದ ಆಂಬುಲೆನ್ಸ್ ಸೇವೆ ಲೋಕಾರ್ಪಣೆ


ಶಿರ್ವ: ಕಾಪು ಪ್ರಖಂಡದ ವಿಶ್ವಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಮೂಡುಬೆಳ್ಳೆ ಘಟಕದ ವತಿಯಿಂದ ಭಾನುವಾರ ಸಾರ್ವಜನಿಕರ ತುರ್ತು ಆರೋಗ್ಯ ಸೇವೆಗಾಗಿ ಉಚಿತ ಆಂಬುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ವಿಶ್ವಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕೆ.ಆರ್. ಲೋಕಾರ್ಪಣೆಗೊಳಿಸಿ ಮಾತನಾಡಿ, ಇದು ವಿಶ್ವಹಿಂದೂ ಪರಿಷದ್ ಉಡುಪಿ ಜಿಲ್ಲಾ ಸೇವೆಗೆ ಮತ್ತೊಂದು  ಗರಿಯಾಗಿದ್ದು, ತುರ್ತು ಸಂದರ್ಭದಲ್ಲಿ ನಾಗರಿಕರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಸಹಕಾರ್ಯದರ್ಶಿ ವಿಶ್ಯಾತ್ ಭಟ್, ಜಿಲ್ಲಾ ಪ್ರಮುಖರಾದ ಜಯಪ್ರಕಾಶ್ ಪ್ರಭು, ಕುಶಾಲ್ ಪೆರ್ಡೂರು, ವಾಣಿ ಆಚಾರ್ಯ, ಪ್ರಸನ್ನ ಭಟ್, ಆನಂದ್ ಶಿರ್ವ, ನಾಗರಾಜ ಭಟ್, ನೆಲ್ಲಿಕಟ್ಟೆ ನಿರಂಜನ್ ರಾವ್ ಬೆಳ್ಳೆ, ಬಿಜೆಪಿಯ ಪ್ರಮುಖರಾದ ರಾಜೇಂದ್ರ ಶೆಟ್ಟಿ, ಗುರುರಾಜ ಭಟ್, ಸಂತೋಷ್ ಕುಮಾರ್ ಮೂಡುಬೆಳ್ಳೆ, ಕೃಷ್ಣ ಆಚಾರ್ಯ, ಮಿಥುನ್ ಪೂಜಾರಿ, ಅಭಿಷೇಕ್ ಆಚಾರ್ಯ, ಆಶಾ ಶೆಟ್ಟಿ, ಸಮಾಜಸೇವಕ ನಟೇಶ್ ತಿರ್ಲಪಲ್ಕೆ, ಸಂಘಟನೆಯ ಕಾರ್ಯಕರ್ತರು, ಮಹಿಳಾ ವಿಭಾಗದ ಪ್ರಮುಖರು ಸಾರ್ವಜನಿಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article