ವಿದ್ಯಾರ್ಥಿಗಳ ಪ್ರತಿಭೆಗೆ 'ವಿಂಗ್ಸ್ ಆಫ್ ವಿಸ್ಡಮ್' ಉತ್ತಮ ವೇದಿಕೆ

ವಿದ್ಯಾರ್ಥಿಗಳ ಪ್ರತಿಭೆಗೆ 'ವಿಂಗ್ಸ್ ಆಫ್ ವಿಸ್ಡಮ್' ಉತ್ತಮ ವೇದಿಕೆ


ಮೂಡುಬಿದಿರೆ: ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ  ಶಾಲೆಯ ಮಾಸಿಕ ನಿಯತಕಾಲಿಕೆಯ ಲೋಕಾರ್ಪಣೆ ಕಾರ್ಯಕ್ರಮವು ಬುಧವಾರ ನಡೆಯಿತು.

ಶಶಿಧರ ಶೆಟ್ಟಿ ಬರೋಡಾ ಅವರು 'ವಿಂಗ್ಸ್ ಆಫ್ ವಿಸ್ಡಮ್' ಮಾಸಿಕ ನಿಯತಕಾಲಿಕೆಯನ್ನು ಲೋಕಾರ್ಪಣೆಗೊಳಿಸಿ ಬಳಿಕ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸಾಹಿತ್ಯಾಸಕ್ತಿ, ಬರವಣಿಗೆ ಕೌಶಲ್ಯ ಹಾಗೂ ಸೃಜನಶೀಲ ಪ್ರತಿಭೆಯನ್ನು ಬೆಳೆಸುವಲ್ಲಿ ಇಂತಹ ಮಾಸಿಕ ನಿಯತಕಾಲಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಾಜದ ಮುಂದೆ ಪರಿಚಯಿಸುವ ಉತ್ತಮ ವೇದಿಕೆಯಾಗಿರುವ ಈ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಶಾಲೆಯ ಅಧ್ಯಕ್ಷರಾದ ಡಾ. ಶರತ್ ಗೋರೆ, ಪ್ರಾಂಶುಪಾಲರಾದ ಡಾ. ಶಶಿಧರ್, ಕಾರ್ಯದರ್ಶಿ ಶಾಂಭವಿ ಗೋರೆ, ಯು.ಕೆ. ಕನ್ಸ್ಟ್ರಕ್ಷನ್‌ನ ಮಾಲೀಕರಾದ ಮಹಮ್ಮದ್ ಇರ್ಫಾನ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article