ಮಣಿ ಕೋಟೆಬಾಗಿಲು ರಚನೆಯ ನೂತನ ತುಳುನಾಟಕ 'ಪ್ರಶ್ನಾರ್ಥಕ' ಶೀರ್ಷಿಕೆ ಬಿಡುಗಡೆ

ಮಣಿ ಕೋಟೆಬಾಗಿಲು ರಚನೆಯ ನೂತನ ತುಳುನಾಟಕ 'ಪ್ರಶ್ನಾರ್ಥಕ' ಶೀರ್ಷಿಕೆ ಬಿಡುಗಡೆ


ಮೂಡುಬಿದಿರೆ: ರಂಗಭೂಷಣ ಮಣಿ ಕೋಟೆಬಾಗಿಲು ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ಈ ವರ್ಷದ ನೂತನ ತುಳು ನಾಟಕ 'ಪ್ರಶ್ನಾರ್ಥಕ' ಇದರ ಶೀರ್ಷಿಕೆ ಬಿಡುಗಡೆ ಕಾಯ೯ಕ್ರಮವು ಬುಧವಾರ ಸಂಜೆ ಕೋಟೆಬಾಗಿಲು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯಿತು.

ಮಹಮ್ಮಾಯಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಹೆಗ್ಡೆ ನಾಟಕದ ಶೀರ್ಷಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ನಾಟಕ ರಚನೆಗಾರ ಮಣಿ ಕೋಟೆಬಾಗಿಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಊರಿನ ಜನರ ಪ್ರೋತ್ಸಾಹ ಹಾಗೂ ಕಲಾಭಿಮಾನಿಗಳ ಸಹಕಾರದಿಂದ ನಾನು ರಂಗಭೂಮಿಯಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ನನ್ನ ಹತ್ತನೇ  ನಾಟಕದ ಶೀಷಿ೯ಕೆಯ ಆಯ್ಕೆಗೆ ಸಾವ೯ಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು ಅದರಲ್ಲಿ ಅನೇಕ ಮಂದಿ ಶೀರ್ಷಿಕೆಯನ್ನು ಸೂಚಿಸಿದ್ದು  ಅವುಗಳಲ್ಲಿ `ಪ್ರಶ್ನಾರ್ಥಕ' ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದ ಅವರು ತಾನು ರಚಿಸಿದ `ಕದಂಬ' ನಾಟಕ 152  ಪ್ರದರ್ಶನ ದಾಖಲಿಸಿದ್ದು ಅದೇ ರೀತಿಯ ಪ್ರೋತ್ಸಾಹವನ್ನು ಪ್ರಶ್ನಾರ್ಥಕ ನಾಟಕಕ್ಕು ಕಲಾಭಿಮಾನಿಗಳು ನೀಡಬೇಕೆಂದು ಅವರು ವಿನಂತಿಸಿದರು. ಪಿಂಗಾರ ಕಲಾವಿದೆರ್ ತಂಡಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದ ಕಲಾವಿದರನ್ನು ಹಾಗೂ ಕಲಾಭಿಮಾನಿಗಳನ್ನು ಗೌರವಿಸಲಾಯಿತು.

ನಾರಂಪಾಡಿಗುತ್ತು ಸುಧೀರ್ ಹೆಗ್ಡೆ, ಚಲನಚಿತ್ರ ನಟ ಸುರೇಶ್ ಅಂಚನ್, ಶಿಕ್ಷಕ ರುಡಾಲ್ಫ್ ಲೋಬೊ, ಬೆದ್ರ ತುಳುಕೂಟದ ಕಾರ್ಯದರ್ಶಿ ಚೇತನಾ ಆರ್. ಹೆಗ್ಡೆ, ಪುರಸಭೆ ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಕಲಾಪೋಷಕ ವಸಂತ ಗುಣನೀಲ, ಉಪಸ್ಥಿತರಿದ್ದರು. 

ಪ್ರವೀಣ್ ನೆಲ್ಲಿಕಟ್ಟೆ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article