ಹಲವಾರು ಡೆಡ್ ಬಾಡಿಗಳನ್ನು "ಪೋಸ್ಟ್ ಮಾರ್ಟಮ್" ಮಾಡಿರುವ ಜಗ್ಗಣ್ಣ ನಿಧನ
Saturday, August 8, 2026
ಮೂಡುಬಿದಿರೆ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಹಲವು ವಷ೯ಗಳ ಕಾಲ ಹಲವಾರು ಡೆಡ್ ಬಾಡಿಗಳನ್ನು "ಪೋಸ್ಟ್ ಮಾರ್ಟಮ್" ಮಾಡಿ ಸೇವೆಯಿಂದ ನಿವೃತ್ತರಾಗಿದ್ದ ಎಲ್ಲರ ಮೆಚ್ಚಿನ ಜಗ್ಗಣ್ಣ (ಜಗದೀಶ್) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಕಾಸರಗೋಡು ಮೂಲದವರಾಗಿರುವ ಅವರು ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ವರ್ಷ ಸೇವೆ ಸಲ್ಲಿಸಿದ್ದರು.
ಕೆಲವೊಂದು ಸಂದಭ೯ದಲ್ಲಿ ಆಸ್ಪತ್ರೆಯಿಂದ ವಾಪಾಸಾಗಿದ್ದ ಅದೆಷ್ಟೋ ರೋಗಿಗಳ ಕೆಲವೊಂದು ಗಾಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶುಚಿಗೊಳಿಸುತ್ತಿದ್ದ ಅವರ ಸೇವಾ ಮನೋಭಾವವನ್ನು ಗುರುತಿಸಿ ಹಲವು ಸಂಘಸಂಸ್ಥೆಗಳು ಸನ್ಮಾನಿಸಿತ್ತು.
ಪೋಸ್ಟ್ ಮಾರ್ಟಮ್ ಗೂ ತಾನೇ ಬೇಕಾದ ಸಾಮಾಗ್ರಿಗಳನ್ನು ತಂದು ತಯಾರಾಗುತ್ತಿದ್ದ ಅವರು ಮೃತರ ಮನೆಯವರಿಂದ ಯಾವುದೇ ಹಣ ಪಡೆದುಕೊಳ್ಳುತ್ತಿರಲಿಲ್ಲ.
ಪೋಸ್ಟ್ ಮಾರ್ಟಮ್ ಜಗ್ಗಣ್ಣನೆಂದೆ ಚಿರಪರಿಚಿತರಾಗಿದ್ದ ಜಗ್ಗಣ್ಣ ಅವರು ಪತ್ನಿ ಭೋಜಮ್ಮ,ಪುತ್ರಿ ಮಧುರಾ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.