ಮಳೆಯ ನಡುವೆ ಸಾಗಿದ ಬೃಹತ್ ಪಂಜಿನ ಮೆರವಣಿಗೆ

ಮಳೆಯ ನಡುವೆ ಸಾಗಿದ ಬೃಹತ್ ಪಂಜಿನ ಮೆರವಣಿಗೆ

ಸಾಂಸ್ಕೃತಿಕ ಮತ್ತು ವೈಚಾರಿಕ ನೆಲೆಯಲ್ಲಿ ಜಾಗೃತಿ ಮೂಡಿಸಬೇಕು: ಪ್ರಥ್ವೀಶ್ ಧಮ೯ಸ್ಥಳ


ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂದೂ ಜಾಗರಣಾ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಜಿಲ್ಲೆ ಇದರ ವತಿಯಿಂದ ಭಾನುವಾರ ಸಂಜೆ  ಬೃಹತ್ ಪಂಜಿನ ಮೆರವಣಿಗೆ ನಡೆಯಿತು.


ಮೂಡುಬಿದಿರೆ ಜೈನ ಮಠದ  ಭಟ್ಟಾರಕ ಸ್ವಾಮೀಜಿ ಅವರು ಸಾವಿರ ಕಂಬ ಬಸದಿ  ಬಳಿಯಲ್ಲಿ ಚಾಲನೆ ನೀಡಿದರು. 


ನಂತರ ಸಮಾಜ ಮಂದಿರದಲ್ಲಿ ಖ್ಯಾತ ನ್ಯಾಯವಾದಿ  ಶರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾಯ೯ಕ್ರಮದಲ್ಲಿ ಪ್ರಖರ ವಾಗ್ಮಿಗಳು ಪೃಥ್ವಿಶ್ ಧರ್ಮಸ್ಥಳ ದಿಕ್ಸೂಚಿ ಭಾಷಣ ಮಾಡಿ ಅಖಂಡ ಭಾರತ ಕೇವಲ ಭೌಗೋಳಿಕ ಕಲ್ಪನೆಯಲ್ಲ. ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಪ್ರದೇಶಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅನಿವಾಯ೯ತೆಯಿದೆ.  


ಭಾರತ ವಿಭಜನೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಜನಸಂಖ್ಯೆಯಲ್ಲಿನ ಬದಲಾವಣೆ ಹಾಗೂ ದೇಶದಲ್ಲಿನ ಜನಸಂಖ್ಯಾ ಬದಲಾವಣೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಅವರು ಹಿಂದೂ ಸಮಾಜ ಸಂಘಟಿತವಾಗಿ ರಾಷ್ಟ್ರದ ಏಕತೆ, ಸಂವಿಧಾನ ಮತ್ತು ಗಣರಾಜ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಅಖಂಡ ಭಾರತದ ಕುರಿತು ಸಾಂಸ್ಕೃತಿಕ ಮತ್ತು ವೈಚಾರಿಕ ನೆಲೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲ ಶರತ್ ಶೆಟ್ಟಿ ಮಾತನಾಡಿ, ಭಾರತದ ಐತಿಹಾಸಿಕ ಶ್ರೀಮಂತಿಕೆಗೆ ಮೂಡುಬಿದಿರೆಯ ಇತಿಹಾಸವೇ ಸಾಕ್ಷಿ ಎಂದರು. 1400ರ ವೇಳೆಯಲ್ಲೇ ಮೂಡುಬಿದಿರೆಯಲ್ಲಿ 18 ಬಸದಿಗಳು ನಿರ್ಮಾಣವಾಗಿದ್ದು, ನಗರ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು ಎಂದರು. ಕೊಲಂಬಸ್ ಭಾರತವನ್ನು ಹುಡುಕಿಕೊಂಡು ಹೊರಟಿದ್ದು ಹಾಗೂ ವಾಸ್ಕೊ ಡ ಗಾಮ ಭಾರತಕ್ಕೆ ಬಂದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಯುವಜನರು ಭಾರತದ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಅರಿಯಬೇಕು ಎಂದರು. ಹಿಂದೂ ಸಮಾಜದ ಒಗ್ಗಟ್ಟಿನಿಂದ ದೇಶದ ಭದ್ರತೆ ಹಾಗೂ ಅಖಂಡ ಭಾರತದ ಸಂಕಲ್ಪ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ರುದ್ರಾಂಶ ಕನ್ಸ್ಟ್ರಕ್ಷನ್ ಮಾಲಕ ಅಜಯ್ ದೀಕ್ಷಿತ್ ಶೆಟ್ಟಿ, ವಿದ್ಯಾನಂದ ಶೆಟ್ಟಿ ಭಾಗವಹಿಸಿದ್ದರು. 

ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ.ಸಿ., ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್,  ತಾಲೂಕು ಸಹಸಂಯೋಜಕರಾದ ಸಂತೋಷ್ ಕುಮಾರ್ ಮತ್ತು ಶರತ್ ಮಿಜಾರ್, ತಾಲೂಕು ಪ್ರಮುಖರಾದ ಸುಧಾಕರ್ ಹೆಗ್ಡೆ, ಸಮೃದ್ಧಿ ಹೆಗ್ಡೆ, ಉದಯ್ ಬನ್ನಡ್ಕ, ದೀಪಕ್ ಬನ್ನಡ್ಕ, ಶಿಶುಪಾಲ್ ಬನ್ನಡ್ಕ, ಜಗದೀಶ್ ಮೂಡಬಿದ್ರೆ, ನಾಗೇಂದ್ರ ಭಂಡಾರಿ, ಜಿಲ್ಲಾ ಪ್ರಮುಖ ಸಂದೀಪ್ ಹೆಗ್ಡೆ, ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಮಾಜಿ ಪುರಸಭೆ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ನಾಗರಾಜ್ ಪೂಜಾರಿ, ವಿಶ್ವ ಹಿಂದೂ ಪರಿಷತ್ ಪ್ರಮುಖ ಶಾಮ್ ಹೆಗ್ಡೆ, ಬಿಜೆಪಿ ಪ್ರಮುಖರಾದ ಅಶೋಕ್ ಶೆಟ್ಟಿ ಬೇಲೂಟ್ಟು, ಸೋಮನಾಥ್ ಕೋಟ್ಯಾನ್, ಜಯಂತ್ ಹೆಗ್ಡೆ ಹಾಗೂ ಶಿತ್ತಾಡಿ ಬಿಲ್ಲವ ಸಂಘದ ಅಧ್ಯಕ್ಷ ಸೋಮನಾಥ್ ಈ ಸಂದಭ೯ದಲ್ಲಿದ್ದರು. 

ವಿಶ್ವನಾಥ್ ಕೋಟ್ಯಾನ್ ಹನ್ನೇರು ಸ್ವಾಗತಿಸಿದರು.  ಗಣೇಶ್ ಬಿ ಅಳಿಯೂರು ಮತ್ತು ರಾಮಕುಮಾರ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು. 


ಸಾವಿರ ಕಂಬದ ಬಸದಿ ಬಳಿಯಿಂದ ಪಂಜಿನ ಬೆಳಕು, ಭಜನಾ ತಂಡಗಳ ಗಾಯನ ಮತ್ತು ರಾಷ್ಟ್ರಭಕ್ತಿಯ ಘೋಷಣೆಗಳ ನಡುವೆ ಸಾವಿರಕ್ಕಿಂತಲೂ ಅಧಿಕ ಕಾಯ೯ಕತ೯ರು, ಮಹಿಳೆಯರು ಮತ್ತು ಮಕ್ಕಳು  ಮೆರವಣಿಗೆ  ಹೊರಡುವ ಸಂದಭ೯ದಲ್ಲಿ ಜೋರಾಗಿ ಮಳೆ ಸುರಿಯಲು ಆರಂಭಿಸಿದ್ದು ಈ ಸಂದಭ೯ ಮಳೆಯ ನಡುವೆಯೆ ಮೂಡುಬಿದಿರೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಸಮಾಜ ಮಂದಿರವನ್ನು ತಲುಪಿ ಗಮನ ಸೆಳೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article