"ಹರ್ ಘರ್ ತಿರಂಗ" ಅಭಿಯಾನ ಕೈಗೊಳ್ಳುವಂತೆ ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಮನವಿ

"ಹರ್ ಘರ್ ತಿರಂಗ" ಅಭಿಯಾನ ಕೈಗೊಳ್ಳುವಂತೆ ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಮನವಿ


ಮೂಡುಬಿದಿರೆ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿಯೊಂದು ಮನೆಯ ಮೇಲೂ ತ್ರಿವಣ೯ ಧ್ವಜವನ್ನು ಹಾರಿಸಬೇಕೆಂಬ ಉದ್ದೇಶವನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿ, ಮುಲ್ಕಿ-ಮೂಡಬಿದಿರೆ ಮಂಡಲವು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಬೂತ್ ಗಳಲ್ಲಿಯೂ 'ಹರ್ ಘರ್ ತಿರಂಗ' ಅಭಿಯಾನವನ್ನು ಕೈಗೊಳ್ಳುವಂತೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಕಾಯ೯ದಶಿ೯ ಹಾಗೂ ಪ್ರಭಾರಿಗಳಿಗೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಮನವಿ ಮಾಡಿದ್ದಾರೆ. 

ತಮ್ಮ ಮಹಾಶಕ್ತಿ ಕೇಂದ್ರ ವ್ಯಾಪ್ತಿಗೆ ಬರುವ ಎಲ್ಲಾ ಬೂತ್ ಗಳಲ್ಲಿನ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಸಾವ೯ಜನಿಕರಿಗೆ ತಿಳಿಸಬೇಕು. ಧ್ವಜ ಹಾರಿಸಿದ ಬಳಿಕ ಅದರ  ಫೋಟೋ ತೆಗೆದು ಸರಳ ಆಪ್ ನಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಬೇಕು ಎಂದು ಪುತ್ರನ್ ತಿಳಿಸಿದ್ದಾರೆ. 

ಮಹಾಶಕ್ತಿ ಕೇಂದ್ರದ ಅಧ್ಯಕ್ಷರು/ಕಾರ್ಯದರ್ಶಿಗಳು ಹಾಗೂ ಪ್ರಭಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಬೂತ್ ಗಳಲ್ಲೂ ಅಭಿಯಾನಕ್ಕೆ ಅಗತ್ಯವಾದ ಮಾಹಿತಿ ನೀಡಿ ಜನರನ್ನು ಭಾಗವಹಿಸುವಂತೆ ಪ್ರೇರೇಪಿಸಬೇಕೆಂದು ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article