ಪವರ್ ಫ್ರೆಂಡ್ಸ್ ಬೆದ್ರದ "ಕುಟುಂಬ ಸಮ್ಮಿಲನ": ಪಿಲಿ ನಲಿಕೆ ಆಮಂತ್ರಣ ಪತ್ರಿಕೆ ಬಿಡುಗಡೆ, ಪವರ್ ಪ್ರಶಸ್ತಿ ಪ್ರದಾನ
ತನಗೆ ಜನ್ಮ ನೀಡಿದ ತಾಯಿಯನ್ನು, ತಾನೇ ಜನ್ಮ ನೀಡಿದ ಮಕ್ಕಳನ್ನು, ಪತಿ ಪತ್ನಿಯನ್ನು, ಹೆಂಡತಿ ಗಂಡನನ್ನು ಕೊಲ್ಲುವ ಪ್ರವೃತ್ತಿ ಬೆಳೆಯುತ್ತಿರುವ ಸಮಾಜದಲ್ಲಿ ಜಾಗೃತಿ ಬಿಂಬಿಸುವ ಕೆಲಸವನ್ನು ಮಾಡಿದೆ.
ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಹಲವು ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಪವರ್ ಫ್ರೆಂಡ್ಸ್ ಪ್ರಮುಖ ಪಾತ್ರ ವಹಿಸಿದೆ. ಯುವಕರು ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜದೊಂದಿಗೆ ಬೆರೆತಾಗ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯ ಜನ್ಮ ಶ್ರೇಷ್ಠವಾದುದು. ಆದ್ದರಿಂದ ನಾವು ನಾಲ್ಕು ಜನರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡುವ ಉದ್ದೇಶವನ್ನು ಸಂಘಟನೆ ಹೊಂದಿದೆ. ನಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಇದಕ್ಕೆ ಸಂಘಟನೆಯ ಎಲ್ಲರ ಸಹಕಾರವಿದ್ದು ಇದರಿಂದಾಗಿಯೇ ಸಮಾಜಸೇವೆ ಮಾಡಲು ಸಹಕಾರಿಯಾಗಿದೆ ಎಂದರು.
ಪವರ್ ಫ್ರೆಂಡ್ಸ್ ಪ್ರಶಸ್ತಿ ಪ್ರದಾನ:
ನಿವೃತ್ತ ಶಿಕ್ಷಕ ನಾರಾಯಣ ನಾಯಕ್, ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಧನಲಕ್ಷ್ಮೀ ಪೂಜಾರಿ, ರಕ್ತದಾನಿ ಮನು ಒಂಟಿಕಟ್ಟೆ, ಪ್ರತಿಭಾನ್ವಿತ ವಿದ್ಯಾರ್ಥಿ ಸುಹಾಸ್ ಹರೀಶ್ ಹೆಗ್ಡೆ, ಸಾಮಾಜಿಕ ಚಟುವಟಿಕೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಎಡಪದವು ಭಜರಂಗದಳ ಸೇವಾ ಬ್ರಿಗೇಡ್ ಅವರಿಗೆ ಪವರ್ ಫ್ರೆಂಡ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ರೋಟರಿ ಝೋನ್ 4, ಡಿಸ್ಟ್ರಿಕ್ಟ್ 3181ರ ಅಸಿಸ್ಟೆಂಟ್ ಗವರ್ನರ್ ಉದ್ಯಮಿಗಳಾದ ಶ್ರೀಕಾಂತ್ ಕಾಮತ್, ಅಬುಲಾಲ್ ಪುತ್ತಿಗೆ, ಮೂಡುಬಿದಿರೆ ಅಧ್ಯಕ್ಷ ಶರತ್ ಜಿ. ಶೆಟ್ಟಿ, ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ನ್ಯೂ ವೈಬ್ರೆಂಟ್ ಕಾಲೇಜಿನ ಪ್ರಾಂಶುಪಾಲ ಎಸ್. ಎನ್.ವೆಂಕಟೇಶ್ ನಾಯಕ್ , ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಡೆನ್ನೀಸ್ ಪಿರೇರಾ, ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಅಮರಶ್ರೀ ಶೆಟ್ಟಿ, ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ನಿಶ್ಮಿತಾ, ಉದ್ಯಮಿ ಸಂದೀಪ್ ಶೆಟ್ಟಿ ಭಾಗವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು. ಗುರು ಪ್ರಸಾದ್ ವಾಷಿ೯ಕ ವರದಿ ಮಂಡಿಸಿದರು. ಶಂಕರ್ ಎ. ಕೋಟ್ಯಾನ್ ಕಾಯ೯ಕ್ರಮ ನಿರೂಪಿಸಿದರು. ಸುಧಾಕರ ಶೆಟ್ಟಿ ವಂದಿಸಿದರು.
ಎಂಜೆ ಸ್ಟೆಫ್ ಆಫ್ ಡ್ಯಾನ್ಸ್ ಸ್ಟುಡಿಯೋ ಮಕ್ಕಳಿಂದ ವೈವಿದ್ಯಮಯ ನೃತ್ಯ ಕಾಯ೯ಕ್ರಮ ನಡೆಯಿತು.

