ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಸ್ವಾತಂತ್ರ್ಯೋತ್ಸವ: ಪ್ರಜ್ಞಾ  ಕೌನ್ಸಿಲಿಂಗ್ ಸಂಸ್ಥೆಗೆ ಅಗತ್ಯ ವಸ್ತುಗಳ ವಿತರಣೆ

ಮೂಡುಬಿದಿರೆ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಸ್ವಾತಂತ್ರ್ಯೋತ್ಸವ: ಪ್ರಜ್ಞಾ ಕೌನ್ಸಿಲಿಂಗ್ ಸಂಸ್ಥೆಗೆ ಅಗತ್ಯ ವಸ್ತುಗಳ ವಿತರಣೆ


ಮೂಡುಬಿದಿರೆ: 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟ್ ಲಿ. ಇದರ ವತಿಯಿಂದ ಪ್ರಜ್ಞಾ ಆಶ್ರಯ ಕೇಂದ್ರದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳು ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.


ಮೂಡುಬಿದಿರೆಯ ವಕೀಲ ಜಯಪ್ರಕಾಶ್ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಮಿಲಾಗ್ರಿಸ್‌ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಪ್ರಕಾಶ್ ನಾಯಕ್  ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಿಲಾಗ್ರಿಸ್ ಸಂಸ್ಥೆಯ ವಸೂಲಾತಿ/ಮಾರಾಟ ಅಧಿಕಾರಿ ಗೌತಮ್ ರೈ, ಪ್ರಜ್ಞಾ ಸಂಸ್ಥೆಯ ಮೇಲ್ವಿಚಾರಕಿ ಶರಣ್ಯ, ಸಮಾಲೋಚಕಿ ವಿದ್ಯಾಲಕ್ಷ್ಮೀ ಉಪಸ್ಥಿತರಿದ್ದರು.

ಸೌಮ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article