ಮಿಜಾರು: ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರಿಗೆ ಗಾಯ

ಮಿಜಾರು: ಗ್ಯಾಸ್ ಸಿಲಿಂಡರ್ ಸೋರಿಕೆ ಮೂವರಿಗೆ ಗಾಯ


ಮೂಡುಬಿದಿರೆ: ಮಿಜಾರಿನ ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಮೂವರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.


ಆಳ್ವಾಸ್ ಕಾಲೇಜಿನಲ್ಲಿ ವಾಚ್ ಮೆನ್ ಆಗಿರುವ ಶಿವರಾಮ (31)  ಆತನ ಪತ್ನಿ ಗಂಗಾ (25) ಹಾಗೂ ಪುತ್ರ ಆದರ್ಶ್ (6)  ಗಾಯಗೊಂಡರು. 

ಶಿವರಾಮ ಅವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿವೆ.

ಗ್ಯಾಸ್ ಸೋರಿಕೆಯಾಗಿರುವ ಬಗ್ಗೆ ಗಮನಕ್ಕೆ ಬಾರದೆ ಇರುವುದರಿಂದ ಬೆಂಕಿ ಹಚ್ಚಿದ್ದಾಗ ಸ್ಟೌವ್ ಗೆ ಬೆಂಕಿ ಹತ್ತಿಕೊಂಡು ಘಟನೆ ನಡೆದಿದೆ. 

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article