ಬೆದ್ರ ತುಳುಕೂಟಕ್ಕೆ ಮಹಿಳಾಮಣಿಗಳ ಸಾರಥ್ಯ: ನೂತನ ಅಧ್ಯಕ್ಷರಾಗಿ ಜಯಂತಿ ಎಸ್. ಬಂಗೇರ, ಕಾಯ೯ದಶಿ೯ಯಾಗಿ ಚೇತನಾ ಹೆಗ್ಡೆ ಆಯ್ಕೆ

ಬೆದ್ರ ತುಳುಕೂಟಕ್ಕೆ ಮಹಿಳಾಮಣಿಗಳ ಸಾರಥ್ಯ: ನೂತನ ಅಧ್ಯಕ್ಷರಾಗಿ ಜಯಂತಿ ಎಸ್. ಬಂಗೇರ, ಕಾಯ೯ದಶಿ೯ಯಾಗಿ ಚೇತನಾ ಹೆಗ್ಡೆ ಆಯ್ಕೆ


ಮೂಡುಬಿದಿರೆ: ತುಳು ಕೂಟ(ರಿ) ಬೆದ್ರ ಇದರ ಮುಂದಿನ  ಎರಡು ವಷ೯ಗಳ ಅವಧಿಗೆ ಅಧ್ಯಕ್ಷರಾಗಿ ತುಳು ಸಾಹಿತಿ ಜಯಂತಿ ಎಸ್. ಬಂಗೇರ, ಕಾಯ೯ದಶಿ೯ಯಾಗಿ ಚೇತನಾ ಹೆಗ್ಡೆ ಆಯ್ಕೆಯಾಗಿದ್ದಾರೆ. 

ಉಪಾಧ್ಯಕ್ಷರಾಗಿ ಶ್ವೇತಾ ಜೈನ್, ಜತೆ ಕಾಯ೯ದಶಿ೯ಯಾಗಿ ಸದಾನಂದ ನಾರಾವಿ, ಕೋಶಾಧಿಕಾರಿಯಾಗಿ ಜಿನೇಂದ್ರ ಜೈನ್ ಆಯ್ಕೆಯಾಗಿದ್ದಾರೆ. 

ತುಳು ಕೂಟ ಬೆದ್ರದ ನಿಗ೯ಮನ ಅಧ್ಯಕ್ಷ ಹೆಚ್. ಧನಕೀತಿ೯ ಬಲಿಪ ಅವರ ಅಧ್ಯಕ್ಷತೆಯಲ್ಲಿ ಕನ್ನಡಭವನದಲ್ಲಿ ಭಾನುವಾರ ನಡೆದ ತುಳುಕೂಟದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.

ಜತೆ ಕಾಯ೯ದಶಿ೯ ಸದಾನಂದ ನಾರಾವಿ ಸ್ವಾಗತಿಸಿದರು. ನಿಗ೯ಮನ ಕಾಯ೯ದಶಿ೯ ವೇಣುಗೋಪಾಲ್ ಶೆಟ್ಟಿ ವಾಷಿ೯ಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಖಚು೯ ವೆಚ್ಚದ ವಿವರ ನೀಡಿದರು. ಈ ಸಂದಭ೯ದಲ್ಲಿ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ನಿಗ೯ಮನ ಗೌರವ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್  ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article