ಭಾರತೀಯ ಜೈನ್‌ಮಿಲನ್‌ನಿಂದ ಸಮಾಜದ ಸಂಘಟನೆ ಮತ್ತು ಬಲವರ್ಧನೆ: ಸುದರ್ಶನ್ ಜೈನ್ ಬಂಟ್ವಾಳ

ಭಾರತೀಯ ಜೈನ್‌ಮಿಲನ್‌ನಿಂದ ಸಮಾಜದ ಸಂಘಟನೆ ಮತ್ತು ಬಲವರ್ಧನೆ: ಸುದರ್ಶನ್ ಜೈನ್ ಬಂಟ್ವಾಳ


ಉಜಿರೆ: ಜೈನರು ಅಲ್ಪಸಂಖ್ಯಾತರಾದರೂ, ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ದಕ್ಷನಾಯಕತ್ವ, ಆದರ್ಶ ಆಹಾರ-ವಿಹಾರ, ಆಚಾರ-ವಿಚಾರಗಳೊಂದಿಗೆ ಉತ್ತಮ ಜೀವನಶೈಲಿ, ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದಿಂದ ಹೃದಯ ಶ್ರೀಮಂತಿಕೆಯೊಂದಿಗೆ ಮುಕ್ತವಾಗಿ ಬೆರೆತು, ಸಾಮಾಜಿಕ ಬದ್ಧತೆ ಮತ್ತು ಸೇವಾಕಳಕಳಿಂದಾಗಿ ಉತ್ತಮ ಸ್ಥಾನ-ಮಾನ ಹೊಂದಿದ್ದಾರೆ. ಎಲ್ಲರಿಂದಲೂ ಗೌರವ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಜೈನ್‌ಮಿಲನ್ ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು.


ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಆಶ್ರಯದಲ್ಲಿ ಆಯೋಜಿಸಿದ ಮಾಸಿಕ ಸಭೆ ಮತ್ತು ಆಹಾರೋತ್ಸವ ಉದ್ಘಾಟಿಸಿ ಜೈನ ಸಮುದಾಯದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.


ಪ್ರಕೃತಿಯ ಮಡಿಲಲ್ಲಿ ಹೇರಳವಾಗಿ ದೊರಕುವ ನೆಲ್ಲಿಕಾಯಿ, ಕೆಸು, ನುಗ್ಗೆ, ಹರಿವೆಸೊಪ್ಪು, ಮಾವು ಮೊದಲಾದ ಪೌಷ್ಠಿಕ ವಸ್ತುಗಳ ಬಳಕೆ ಮತ್ತು ಮಹತ್ವದ ಬಗ್ಗೆ ಅರಿವು, ಜಾಗೃತಿ, ಮೂಡಿಸುವುದೇ ಆಹಾರೋತ್ಸವದ ಉದ್ದೇಶವಾಗಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಸೇವಾಸಂಸ್ಥೆಯಾದ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ಅಲ್ಲಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಿನಭಜನಾ ಸ್ಪರ್ಧೆ ಆಯೋಜಿಸಿ ಸಮಾಜದ ಸಂಘಟನೆಯೊಂದಿಗೆ. ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಯುತ್ತಿದೆ. 2027ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ಜರುಗಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಫೆ.13 ಮತ್ತು 14 ರಂದು ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು.

ಇದೇ ಅಕ್ಟೋಬರ್ 25ರಂದು ವೇಣೂರಿನಲ್ಲಿ ‘ಕರಾವಳಿ ಮಿಲನೋತ್ಸವ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ಎಲ್ಲರೂ ಸಕ್ರಿಯ ಸಹಕಾರ ನೀಡಬೇಕೆಂದು ಅವರು ಕೋರಿದರು.

ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್ ಮಾತನಾಡಿ, ಜೈನ್‌ಮಿಲನ್ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕೆಂದು ಕೋರಿದರು.

ಭಾರತೀಯ ಜೈನ್‌ಮಿಲನ್ ವಲಯ-8ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿ ಸ್ಥಳೀಯ ಜೈನ್‌ಮಿಲನ್‌ಗಳ ಮೂಲಕ ಆಯಾ ಊರಿನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.

ಕಕ್ಕಿಂಜೆಯ ಪಾಕಶಾಸ್ತ್ರ ಪ್ರವೀಣರಾದ ಅಶೋಕ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು.

ಅರ್ಪಣಾ ರವೀಶ್ ವರದಿ ಸಾದರಪಡಿಸಿದರು. ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ಸನ್ಮತಿಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ಶಿಕ್ಷಕ ರವೀಶ್ ಕುಮಾರ್ ವಂದಿಸಿದರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಆರಂಭಿಸಿ, ಕೊನೆಯಲ್ಲಿ ಶಾಂತಿಮಂತ್ರ ಪಠಣದೊಂದಿಗೆ ಸಮಾಪನಗೊಳಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article