ಸಾವಿರ ಬೀಡಿಗೆ ರೂ. 46.80 ಬೋನಸ್

ಸಾವಿರ ಬೀಡಿಗೆ ರೂ. 46.80 ಬೋನಸ್

ಪುತ್ತೂರು: ಪ್ರತಿ ವರ್ಷದಂತೆ 2026 ನೇ ಸಾಲಿನ ಬೀಡಿ ಕಾರ್ಮಿಕರ ಬೋನಸ್, ರಜಾಸಂಬಳ, ಹಬ್ಬದ ರಜಾಸಂಬಳ ಒಟ್ಟಿಗೆ ಬಿಡುಗಡೆಯಾಗಿದ್ದು ಪ್ರತಿ ಸಾವಿರ ಬೀಡಿಗೆ ರೂ.46.80 ದೊರೆಯಲಿದೆ. 1 ಲಕ್ಷ ಬೀಡಿ ಕಟ್ಟಿದವರಿಗೆ ತಲಾ ರೂ.4,680 ಬೋನಸ್ ಸಿಗಲಿದೆ. ಅದನ್ನು ಕಾರ್ಮಿಕರು ಪಡಕೊಳ್ಳಬೇಕು ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಪಿ.ಕೆ.ಸತೀಶನ್, ಕಾರ್ಯದರ್ಶಿ ಬಿ.ಎಂ.ಭಟ್, ಖಜಾಂಜಿ ಈಶ್ವರಿ ಶಂಕರ್ ಮುಂಡೂರು ಅವರು ತಿಳಿಸಿದ್ದಾರೆ.

ಸರ್ಕಾರ ನಿಗದಿ ಪಡಿಸಿದ ಹೊಸ ಕನಿಷ್ಟ ಕೂಲಿ ಪ್ರತಿ ಸಾವಿರ ಬೀಡಿಗೆ ರೂ 312.81 ರಂತೆ ಸಿಗಬೇಕಿದ್ದು, ಅದರಲ್ಲಿ ಬೀಡಿ ಮಾಲಕರು ಈಗ ಸರ್ಕಾರದ ಆದೇಶ ಉಲ್ಲಂಘಿಸಿ ಪ್ರತಿ ಸಾವಿರ ಬೀಡಿಗೆ ರೂ.295.77 ಮಾತ್ರಾ ಬಿಡುಗಡೆ ಮಾಡಿ ರೂ. 17.07 ಈ ವರ್ಷವೂ ಬಾಕಿ ಮಾಡಿರುತ್ತಾರೆ. ಈಗ ಬೀಡಿ ಮಾಲಕರು ನೀಡಿದ ವೇತನದಲ್ಲಿ ಪ್ರತಿ ಸಾವಿರ ಬೀಡಿ ವೇತನದಲ್ಲಿ ಪಿ.ಎಫ್‌ಗೆ ರೂ. 30 ಕಡಿತಗೊಂಡು ರೂ.265.77 ರಂತೆ ಕಾರ್ಮಿಕರ ಹಸ್ತ ವೇತನ ನೀಡಬೇಕಿದೆ. 

ಬೋನಸ್ ಮತ್ತು ವೇತನ ಸಮರ್ಪಕವಾಗಿ ಸಿಗದವರು 9448155980, 8792591538, 9448311240, ನಂಬ್ರಕ್ಕೆ ಕಾಲ್ ಮಾಡಿ ತಿಳಿಸಿದರೆ ಬೀಡಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿರುವ ಅವರು ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article