ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕಮ್ಯುನಿಕೇಟ್ ಟು ಕನೆಕ್ಟ್, ಕನೆಕ್ಟ್ ಟು ಸಕ್ಸೀಡ್’ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ
Monday, August 17, 2026
ಪುತ್ತೂರು: ಸಂತ ಫಿಲೋಮಿನ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ವಿಭಾಗ, ಐಕ್ಯೂಎಸಿ ಹಾಗೂ ಇನ್ಸ್ಟಿಟ್ಯೂಷನ್ಸ್ ಇನೋವೇಶನ್ ಕೌನ್ಸಿಲ್ ವತಿಯಿಂದ ‘ಕಮ್ಯುನಿಕೇಟ್ ಟು ಕನೆಕ್ಟ್, ಕನೆಕ್ಟ್ ಟು ಸಕ್ಸೀಡ್’ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಕಾಲೇಜಿನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ಗುರುವಾರ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ, ಅವಕಾಶ ಸಿಕ್ಕಾಗ ಮೌನವಾಗಿ ಇರಬಾರದು. ಸಂವಹನವೇ ಶಕ್ತಿಯುತ ಸಂಪರ್ಕದ ಕೀಲಿ. ಒಂದು ಮಾತು ತಂಡವನ್ನು ಕಟ್ಟಬಹುದು, ಒಂದು ಸಮುದಾಯವನ್ನು ಬೆಸೆಯಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜಿನ ನಿವೃತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಅವರು ಮಾತಿನ ಮೂಲಕ ಪ್ರೇರಣೆ ನೀಡುವವರು. ಜನರನ್ನು ಸಂಪರ್ಕಿಸುತ್ತಾರೆ ಎಂದು ಹೇಳಿದರು. ಕೈಯಿಂದ ಮಾಡುವ ಕೆಲಸವೇ ಪ್ರಗತಿಯ ಮೂಲ. ಅದರೊಂದಿಗೆ ಮಾತಿನಿಂದ ಪ್ರೋತ್ಸಾಹ ನೀಡಿದಾಗ ಮಾತ್ರ ಸಮಾಜ ಒಗ್ಗೂಡುತ್ತದೆ ದುಡಿದು ಸಾಧಿಸಿ, ಮಾತಾಡಿ ಒಗ್ಗೂಡಿಸಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಧೆ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಭಾರತಿ ಎಸ್. ರೈ, ಐಕ್ಯೂಎಸಿ ಸಂಯೋಜಕ ಡಾ. ಎದ್ವಿನ್ ಡಿಸೋಜಾ, ಉಪಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಮೊಳೆಯರ್, ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ನೋವೇಲಿನ್ ಡಿಸೋಜಾ, ಸುಷ್ಮ ಕ್ರಾಸ್ತ, ವಿನಿಲ್ ಡಿಸೋಜಾ, ಎಕನಾಮಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ವಾಸುದೇವ ಎನ್. ಉಪಸ್ಥಿತರಿದ್ದರು.
ಸನ್ನಿಧಿ ಮತ್ತು ತಂಡ ಪ್ರಾರ್ಥಿಸಿದರು. ಶುಭಾನ್ ಶೇನೋಯ್ ಸ್ವಾಗತಿಸಿ, ಕೃಷ್ಣ ವಂಶಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಆದಿತ್ಯ ಕುಡ್ವ ವಂದಿಸಿ, ಮೋನಿಷಾ ನಿರೂಪಿಸಿದರು.


