ಮುದರಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ, ಉದ್ಯಮಿ ಪ್ರಿನ್ಸ್ ಪಾಯಿಂಟ್ ಡೇವಿಡ್ ಡಿಸೋಜರನ್ನು ಹಾಡುಹಗಲೇ ಗುಂಡಿಕ್ಕಿ ಹತ್ಯೆ
Friday, August 7, 2026
ಶಿರ್ವ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಉದ್ಯಮಿ ಶಿರ್ವ ಪ್ರಿನ್ಸ್ ಪಾಯಿಂಟ್‌ನ ಡೇವಿಡ್ ಡಿಸೋಜರನ್ನು ಇಂದು ಅಪರಾಹ್ನ ಮುದರಂಗಡಿಯಲ್ಲಿರುವ ಅವರ ಕಛೇರಿಯ ಸಮೀಪ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ದುಷ್ಕರ್ಮಿಗಳು ಪಿಸ್ತುಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಅವರ ತಲೆಭಾಗಕ್ಕೆ ತಾಗಿದ ಗುಂಡಿನಿಂದ ಕುಸಿದು ಬಿದ್ದ ಡೇವಿಡ್ ಇವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ದಾರಿ ಮಧ್ಯದಲ್ಲೇ ಅವರು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ. ಇವರು ಮುದರಂಗಡಿ ಪ್ರಿನ್ಸ್ ಬಾರ್‌ನ ಮಾಲಕರೂ, ಅದಾನಿ ಪವರ್‌ನ ಗುತ್ತಿಎಗೆದಾರರಾಗಿದ್ದು, ಬಸ್ ಮಾಲಕರಾಗಿಯೂ ಗುರುತಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದರು. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ..!