ಕುಕ್ಕೆ ಬಸ್ಟ್ಯಾಂಡಿನಲ್ಲಿ ಜಾರಿ ಬೀಳುತ್ತಿರುವ ಭಕ್ತಾದಿಗಳು ಪ್ರಯಾಣಿಕರು

ಕುಕ್ಕೆ ಬಸ್ಟ್ಯಾಂಡಿನಲ್ಲಿ ಜಾರಿ ಬೀಳುತ್ತಿರುವ ಭಕ್ತಾದಿಗಳು ಪ್ರಯಾಣಿಕರು


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸ್ಟ್ಯಾಂಡ್‌ನಲ್ಲಿ ದಿನಂಪ್ರತಿ ಸಾವಿರಾರು ಭಕ್ತಾದಿಗಳು ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದಾಡುತ್ತಿರುವುದು ಸರ್ವೇಸಾಮಾನ್ಯ. 


ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ಸ್ಟ್ಯಾಂಡಿನ ಇಕ್ಕೆಲೆಗಳಲ್ಲಿ ಹಾಗೂ ಎದುರಿನ ಮಾರ್ಗದ ಬದಿಗಳಲ್ಲಿ ಅಲ್ಲದೆ ಪ್ರಯಾಣಿಕರು ವಿಶ್ರಾಂತಿ ಪಡೆಯುತ್ತಿರುವ ಸ್ಥಳಗಳಲ್ಲಿ ಪಾಚಿ/ ಹವಾಸೆಯಿಂದಾಗಿ ಪ್ರಯಾಣಿಕರು ಭಕ್ತಾದಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾರಿ ಬೀಳುತ್ತಿರುವುದು ಕಳೆದ ಹಲವಾರು ದಿನಗಳಿಂದ ನಡೆಯುತ್ತಿದೆ. 


ಹೀಗಿದ್ದು ಬಸ್ ಸ್ಟ್ಯಾಂಡಿನ ಸಂಚಾರ ನಿಯಂತ್ರಕರು ಆಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಹಾವಸೆ ಅಥವಾ ಪಾಚಿ ಇರುವ ಜಾಗಕ್ಕೆ ಸುಣ್ಣ ಅಥವಾ ಬ್ಲೀಚಿಂಗ್ ಪೌಡರ್ ಹಾಕುವ ಕಾರ್ಯಕ್ಕೆ ತೊಡಗಿಲ್ಲ. ಆದ್ದರಿಂದ ಕೂಡಲೇ ಬ್ಲಿಚಿಂಗ್ ಪೌಡರ್ ಅಥವಾ ಸುಣ್ಣ ಹಾಕಿ ಶುಚಿಗೊಳಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article