ತಿರುವೋಣಂ ಬಂಪರ್ ಲಾಟರಿ: 1 ಕೋಟಿ ರೂ. ಬಂಟ್ವಾಳಕ್ಕೆ
Wednesday, September 30, 2026
ಬಂಟ್ವಾಳ: ಕೇರಳದ ತಿರುವೋಣಂ ಬಂಪರ್ ಲಾಟರಿಯ ಎರಡನೇ ಬಹುಮಾನ 1 ಕೋಟಿ ರೂ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿಗೆ ಕುಲಾಯಿಸಿದೆ.
ಬಂಟ್ವಾಳ ತಾಲೂಕಿನ ಪಣೋಲಿಬೈಲ್ ನಿವಾಸಿ ರೋಹಿತ್ ಅವರು ಖರೀದಿಸಿದ ಒಂದೇ ಟಿಕೆಟ್ ಅದೃಷ್ಟ ಒಲಿದಿದೆ.
ಅದೃಷ್ಟ ಖುಲಾಯಿಸಿದ ಟಿಕೆಟ್‌ನೊಂದಿಗೆ ರೋಹಿತ್ ಅವರು ಸಬ್ ಏಜೆಂಟ್ ಮಂಜುನಾಥ್ ಅವರೊಂದಿಗೆ ಕಾಸರಗೋಡಿನ ನ್ಯೂ ಲಕ್ಕಿ ಸೆಂಟರ್ ಏಜೆನ್ಸಿಗೆ ಭೇಟಿ ನೀಡಿ ಸಂಸ್ಥೆಯ ಸಿಬ್ಬಂದಿಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ರೋಹಿತ್ ಅವರಿಗೆ 1 ಕೋಟಿ ಬಹುಮಾನ ಲಭಿಸುತ್ತಿದ್ದಂತೆ ನ್ಯೂ ಲಕ್ಕಿ ಸೆಂಟರ್‌ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.