100 ವರ್ಷದ ಅಪಾಯಕಾರಿ ಬೃಹತ್ ಮರ ತೆರವು
Tuesday, September 8, 2026
ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟುವಿನಲ್ಲಿ ಬೀಳುವ ಹಂತದಲ್ಲಿದ್ದ ಸುಮಾರು 100 ವರ್ಷಕ್ಕು ಅಧಿಕ ವರ್ಷದ ಬೃಹತ್ ಮರವನ್ನು ಶುಕ್ರವಾರ ತೆರವುಗೊಳಿಸಲಾಯಿತು.
ದ.ಕ. ಜಿಲ್ಲಾ ಅಟೋರಿಕ್ಷಾ ಚಾಲಕ, ಮಾಲಮರ ಸಂಘದ ಬಂಟ್ವಾಳ ಘಟಕದ ಅಧ್ಯಕ್ಷ ವಿಶ್ವನಾಥ್ ಚಂಡ್ತಿಮಾರ್ ಅವರು ವಿಶೇಷ ಮುತುವರ್ಜಿ ವಹಿಸಿ ಈ ಅಪಾಯಕಾರಿ ಮರವನ್ನು ತೆರವುಗೊಳಿಸಲಾಯಿತು.
ಬಂಟ್ವಾಳ ಮೆಸ್ಕಾಂ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬಂಟ್ಚಾಳ ಅರಣ್ಯ ಇಲಾಖಾ ಸಿಬ್ಬಂದಿಗಳು ಈ ಮರವನ್ನು ತೆರವುಗೊಳಿಸಿದ್ದಾರೆ. ಈ ಸಂದರ್ಭ ಸ್ಥಳೀಯ ಯುವಕರು ಸಹಕರಿಸಿದರು.