ಪಾದಚಾರಿ ಮಹಿಳೆಗೆ ರಿಕ್ಷಾ ಢಿಕ್ಕಿ
Monday, September 7, 2026
ಬಂಟ್ವಾಳ: ಇಲ್ಲಿನ ಬೈಪಾಸ್ ಜಂಕ್ಷನ್ ಬಳಿ ಪಾದಚಾರಿ ಮಹಿಳೆಯೋರ್ವರಿಗೆ ಅಟೋರಿಕ್ಷಾ ಢಿಕ್ಕಿ ಹೊಡೆದ ಘಟನೆ ಸಂಭವಿಸಿದ್ದು, ಪರಿಣಾಮ ಮಹಿಳೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಳಿಕ ಚಾಲಕ ರಿಕ್ಷಾ ಸಹಿತ ಪರಾರಿಯಾಗಲು ಯತ್ನಿಸಿದ್ದು, ಆಗ ಸ್ಥಳಿಯರು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿದ್ದಾರೆ. ಪಂಜಿಕಲ್ಲಿನ ಎನಿಲಕೋಡಿ ಉಮೇಶ್ ಸಪಲ್ಯ ಅವರ ಪತ್ನಿ ಶಶಿಕಲಾ ಅವರು ಗಾಯಗೊಂಡಿದ್ದಾರೆ.
ಬೈಪಾಸ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಊಟಮಾಡಿ ಕೆಲಸದ ನಿಮಿತ್ತ ಬೈಪಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಂಟ್ವಾಳ ಪೇಟೆ ಕಡೆಯಿಂದ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಶಿಕಲಾ ಅವರಿಗೆ ಢಿಕ್ಕಿ ಹೊಡೆದಿದೆ.
ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.