ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ದುಸ್ಥಿತಿ: ಹೆಸರಿಗಷ್ಟೇ ತಾಲೂಕು ಆಸ್ಪತ್ರೆ, ಆಧುನಿಕ ಶೈತ್ಯಾಗಾರ, ಮೂಲಭೂತ ಸೌಕರ್ಯಗಳೇ ಇಲ್ಲದ ಶವಾಗಾರ.!

ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ದುಸ್ಥಿತಿ: ಹೆಸರಿಗಷ್ಟೇ ತಾಲೂಕು ಆಸ್ಪತ್ರೆ, ಆಧುನಿಕ ಶೈತ್ಯಾಗಾರ, ಮೂಲಭೂತ ಸೌಕರ್ಯಗಳೇ ಇಲ್ಲದ ಶವಾಗಾರ.!


ಬಂಟ್ವಾಳ: ಹೆಸರಿಗೇನೋ ತಾಲೂಕು ಸರ್ಕಾರಿ ಆಸ್ಪತ್ರೆ, ಆದರೆ ಮೂಲಭೂತ ಸೌಕರ್ಯವಿಲ್ಲದೇ ಮೃತರ ವಾರಸುದಾರರು, ಪೊಲೀಸ್ ಸಿಬ್ಬಂದಿ ನರಕಯಾತನೆ ಅನುಭವಿಸುತ್ತಿರುವ ದುಸ್ಥಿತಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ್ದು, ಪ್ರತಿನಿತ್ಯ ಅಪಘಾತ, ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ನಡೆಯುವುದು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿಯೇ. ಆದರೆ ಇಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ವರದಿ ಬರೆಯಲು ಕುಳಿತುಕೊಳ್ಳಲು ಒಂದು ಬೆಂಚ್ ಕೂಡ ಇಲ್ಲ. ಮೃತರ ಸಂಬಂಧಿಕರು ಗಂಟೆಗಟ್ಟಲೆ ನಿಂತುಕೊಂಡೇ ಕಾಲಹರಣ ಮಾಡಬೇಕಾದ ಸ್ಥಿತಿ.

ಪೊಲೀಸರು ವರದಿ ಬರೆಯಬೇಕಾದರೆ ನೆಲದಲ್ಲಿ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ಸಹೋದ್ಯೋಗಿಯ ಬೆನ್ನ ಮೇಲೆ ಫೈಲ್ ಇಟ್ಟು ಬರೆಯುವ ಅನಿವಾರ್ಯತೆ ಇದೆ. ಗ್ರಾಮೀಣ ಆಸ್ಪತ್ರೆಗಳ ಶವಾಗಾರದ ಮುಂದೆ ಕನಿಷ್ಠ ತಗಡಿನ ಮೇಲ್ಛಾವಣಿ, ಕಲ್ಲಿನ ಬೆಂಚ್ ಆದರೂ ಇರುತ್ತದೆ. ಆದರೆ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಅದೂ ಇಲ್ಲ ಎಂದು ಮೃತರ ಸಂಬಂಧಿಕರು ಶಾಸಕರು, ವೈದ್ಯಾಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿ ಹುಲ್ಲು, ಗಿಡ-ಪೊದೆಗಳು ಬೆಳೆದು ಇದೇನು ಸಫಾರಿಗೆ ಹೋಗುವ ಮೃಗಾಲಯವೋ ಆಥವಾ ತಾಲೂಕು ಸರ್ಕಾರಿ ಆಸ್ಪತ್ರೆಯೋ ಎಂಬುದು ಅರ್ಥವಾಗುತ್ತಿಲ್ಲ. ಡ್ರೈನೇಜ್ ಕಚಳಚೆ ನೀರು ರಸ್ತೆಯ ಮೇಲೆಯೇ ಬಂದು ಬೀಳುತ್ತಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವುದು ವೈದ್ಯರೋ ಅಥವಾ ಅನಕ್ಷರಸ್ಥರೋ ಎಂಬುದು ಪ್ರಶ್ನಿಸುವಂತಾಗಿದೆ. 

ಇಂತಹ ಅವ್ಯವಸ್ಥೆಯ ಬಗ್ಗೆ ಈವರೆಗೆ ಬೆಳಕು ಚೆಲ್ಲದ ಮಾಧ್ಯಮಗಳ ವಿರುದ್ಧವೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ತಾಲೂಕು ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶವಾಗಾರದ ಮುಂದೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article