ಗಿಳಿವಿಂಡುವಿಗೆ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಭೇಟಿ

ಗಿಳಿವಿಂಡುವಿಗೆ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಭೇಟಿ


ಮಂಜೇಶ್ವರ: ಮಂಜೇಶ್ವರದ ಗಿಳಿವಿಂಡುವಿಗೆ ಮೈಸೂರು ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಭೇಟಿ ನೀಡಿ ಕಾರ್ಯ ಚಟುವಟಿಕೆಗಳ ಹಾಗೂ ಭವಿಷ್ಯದ ಕಾರ್ಯ ಚಟುವಟಿಗಳ ಕುರಿತು ಮಾಹಿತಿ ಪಡೆದರು. 

ರಾಷ್ಟ್ರಕವಿ ಗೋವಿಂದ ಪೈಗಳನ್ನು ಹಾಗೂ ಅವರ ಸಾಹಿತ್ಯದ ಮೌಲ್ಯವನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಶ್ರಮಿಸುವಂತೆ ಸೂಚಿಸಿ, ಸರಕಾರದ ಕಡೆಯಿಂದ ಇಲಾಖೆಯ ಮೂಲಕ ಸಂಪೂರ್ಣ ಸಹಕಾರದ ಭರವಸೆ ನೀಡಿ ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು.  

ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜೊತೆಗಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ಗೆ ಆಗಮಿಸಿದಾಗ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸೈಫುಲ್ಲಾ ತಂಗಳ್, ಟ್ರಸ್ಟಿಗಳಾದ ಡಾ. ಉದಯ್ ಕುಮಾರ ಇರ್ವತ್ತೂರು, ಸುಭಾಷಚಂದ್ರ ಕಣ್ವತೀರ್ಥ, ಗಮಕ ಪರಿಷತ್ ಅಧ್ಯಕ್ಷ ಶಂಕರ ನಾರಾಯಣ ಭಟ್ ಉಪಸ್ಥಿತಿರಿದ್ದು, ನಿರ್ಮಲಾ ಮಠಪತಿ ಅವರನ್ನು ಶಾಲು ಹೊದಿಸಿ, ಪುಸ್ತಕ ನೀಡಿ ಆದರದಿಂದ ಬರಮಾಡಿಕೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article