200 ರೂ. ಆಸೆಗಾಗಿ 9.33 ಲಕ್ಷ ಕಳೆದುಕೊಂಡ ಯುವತಿ..

200 ರೂ. ಆಸೆಗಾಗಿ 9.33 ಲಕ್ಷ ಕಳೆದುಕೊಂಡ ಯುವತಿ..

ಮಂಗಳೂರು: ಕೇವಲ 200 ರೂಪಾಯಿ ಗಳಿಸುವ ಸಣ್ಣ ಆಸೆಯೊಂದಿಗೆ ಆರಂಭವಾದ ’ವರ್ಕ್ ಫ್ರಮ್ ಹೋಮ್’ ಡಾಟಾ ಎಂಟ್ರಿ ಕೆಲಸ, ಕೊನೆಗೆ ಯುವತಿಯೊಬ್ಬಳು ಬರೋಬ್ಬರಿ 9,33,866 ರೂಪಾಯಿ ಕಳೆದುಕೊಂಡಿರುವ ಘಟನೆ ಮಂಗಳೂರಿನ ಸಿಇಎನ್ (ಅಇಓ) ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 

ನಗರದ 25 ವರ್ಷದ ಯುವತಿ ಈ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಂತ್ರಸ್ತೆ. ಈ ಬಗ್ಗೆ ಮಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸೆ.11ರಂದು ಮಧ್ಯಾಹ್ನ 2.30 ಗಂಟೆಗೆ ಸಂತ್ರಸ್ತೆಯ ವಾಟ್ಸಾಪ್‌ಗೆ ಅಪರಿಚಿತ ಮೊಬೈಲ್ ಸಂಖ್ಯೆ 8135897645 ಯಿಂದ ಸಂದೇಶ ಬಂದಿತ್ತು. ತಾನು ‘ಮೇಘಾ ಕಂಪನಿ’ ಹೆಡ್ ಆಫೀಸ್‌ನ ಹೆಚ್‌ಆರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಮನೆಯಲ್ಲೇ ಕುಳಿತು ದಿನಕ್ಕೆ 20 ಟಾಸ್ಕ್ ಮುಗಿಸಿದರೆ 200 ರೂಪಾಯಿ ಸಿಗುತ್ತದೆ ಎಂದು ನಂಬಿಸಿ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದನು. 

ಲಿಂಕ್ ಮೂಲಕ ಜಾಯಿನ್ ಆಗಿ ಮೊದಲ ದಿನ ನೀಡಿದ 20 ಟಾಸ್ಕ್ ಮುಗಿಸಿದ ಯುವತಿಯ ಬ್ಯಾಂಕ್ ಖಾತೆಗೆ ವಂಚಕರು ಸರಿಯಾಗಿ 200 ರೂಪಾಯಿ ಜಮೆ ಮಾಡಿದ್ದರು. ಕೈಗೆ ಬಂದ 200 ರೂಪಾಯಿಯನ್ನು ನೋಡಿ ನಂಬಿದ ಯುವತಿ, ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತ ಸಿಗಬಹುದು ಎಂಬ ಆಸೆಗೆ ಬಿದ್ದಿದ್ದರು.

ಮರುದಿನ 13 ಟಾಸ್ಕ್‌ಗಳನ್ನು ನೀಡಲಾಗಿದ್ದು, ಅವು ಅಪೂರ್ಣಗೊಂಡಾಗ ‘@ಣuಣoಡಿಛಿoಜe೩೨೧’ (ಪ್ರೊಫೈಲ್ ಹೆಸರು: ಅಮರ್ಜೀತ್ ಕುಮಾರ್) ಎಂಬಾತನನ್ನು ಸಂಪರ್ಕಿಸಲು ಸೂಚಿಸಲಾಯಿತು. ಆತನ ಮಾತು ನಂಬಿ ಯುವತಿ ಮೊದಲು ಗೂಗಲ್ ಪೇ ಮೂಲಕ 3,000 ರೂಪಾಯಿ ಕಟ್ಟಿದ್ದಾರೆ. ಟಾಸ್ಕ್ ಪೂರ್ಣಗೊಳ್ಳದ ಕಾರಣ ಹಣವನ್ನು ವಾಪಸ್ ಕೇಳಿದಾಗ, "ಹೂಡಿಕೆ ಮಾಡಿದ ಹಣ ಮತ್ತು ಕಮಿಷನ್ ಹಿಂಪಡೆಯಬೇಕಾದರೆ ಮುಂದಿನ ಟಾಸ್ಕ್ ಮುಗಿಸಬೇಕು, ಅದಕ್ಕಾಗಿ ಪ್ರೀಮಿಯಂ ಡೆಪಾಸಿಟ್ ಕಟ್ಟಬೇಕು" ಎಂದು ಹಂತ ಹಂತವಾಗಿ ಸೈಬರ್ ಖದೀಮರು ಬಲೆ ಬೀಸಿದ್ದಾರೆ. ಇದನ್ನು ಸತ್ಯವೆಂದು ನಂಬಿದ ಯುವತಿ, ಸೆ.12ರಿಂದ 17ರ ಅವಧಿಯಲ್ಲಿ ಅವರು ನೀಡಿದ ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 9,33,866 ರೂಪಾಯಿ ವರ್ಗಾಯಿಸಿ ಕಂಗಾಲಾಗಿದ್ದಾರೆ. 

ಕೊನೆಗೆ ಹಣವೂ ಬಾರದೆ, ಹೂಡಿಕೆ ಮಾಡಿದ ಮೊತ್ತವೂ ಕೈ ಸೇರದಿದ್ದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದು ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗಳ ಪತ್ತೆಗೆ ಬಲೆ ಬೀಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article