ಮಂಗಳೂರು ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸಮಗ್ರ ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರು ಎಂಆರ್ ಪಿಎಲ್ ನಲ್ಲಿ ಭಾರೀ ಸ್ಫೋಟ: ಸಮಗ್ರ ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರು: ಮಂಗಳೂರಿನ ಎಂಆರ್ ಪಿಎಲ್ ಕೋಕ್ ಸಲ್ಫರ್ ಘಟಕದ ಸಿಎಸ್ ಟಿ ಮೂರನೇ ಪ್ಲಾಂಟ್ ನಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು ಇದರಿಂದ ಎಂಆರ್ ಪಿಎಲ್ ಸುತ್ತಮುತ್ತಲು ವಾಸಿಸುತ್ತಿರುವ ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಎಂಆರ್ ಪಿಎಲ್ ಆಸುಪಾಸಿನ ಸುಮಾರು 3 ಕಿಲೋಮೀಟರ್ ವಿಸ್ತೀರ್ಣದಲ್ಲಿ ಇರುವಂತಹ ಕಟ್ಟಡ ಮನೆಗಳಿಗೆ ಹಾನಿಯಾಗಿದ್ದು, ಈ ಹಾನಿಯು ಈ ಸ್ಪೋಟದ ಅಗಾದತೆಯನ್ನು ತಿಳಿಸುತ್ತದೆ. 

ಎಂಆರ್‌ಪಿಎಲ್ ನ ವಿಸ್ತರಿತ ಯೋಜನೆಯದ ಕೋಕ್ ಸಲ್ಫರ್ ಘಟಕವು ಆರಂಭಗೊಂಡ ಸಂದರ್ಭದಲ್ಲಿಯೇ ಡಿವೈಎಫ್ ಐ ಇದನ್ನು ವಿರೋಧಿಸಿದ್ದು ಮತ್ತು ಇದರ ಅಪಾಯದ ಮುನ್ಸೂಚನೆಯನ್ನು ಕೂಡ ನೀಡಿತ್ತು.ಆದರೆ ಸರಕಾರವು ಈವರೆಗೂ ಈ ಕುರಿತು ವಹಿಸಿರುವ ಮೌನ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಡಿವೖಎಫ್ಐ ಆರೋಪಿಸಿದೆ.

ಯಾವುದೇ ಅಪಾಯಕಾರಿ ಕೖಗಾರಿಕೆಗಳು ಸ್ಥಾಪನೆಯಾಗುವಾಗ ಸರಕಾರವು ಅಪಾಯದ ಮೌಲ್ಯ ಮಾಪನ ನಡೆಸಬೇಕು.ಅನ್ವಯಿಸುವ ಕೈಗಾರಿಕೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳ ಸಂಗ್ರಹ, ಬಳಕೆ ಮತ್ತು ನಿರ್ವಹಣೆಗೆ ನಿರ್ದಿಷ್ಟ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಮತ್ತು ತೀವ್ರ ನಿಗಾ ವ್ಯವಸ್ಥೆಯು ಆ ಕೖಗಾರಿಕಾ ವಲಯದ ಒಳಗಡೆ ಇರುವಂತೆ ನೋಡಿಕೊಳ್ಳಬೇಕು ಇಂತಹ ಪ್ರಾಮುಖ್ಯ ಅಂಶಗಳನ್ನು ಸರಕಾರವು ಕಡೆಗಣೆಸಿರುವುದು ಮತ್ತು ಈ ಕೖಗಾರಿಕಾ ವಲಯದಲ್ಲಿ ಸಣ್ಣ ಪ್ರಮಾಣದ ಅನೇಕ ಸ್ಪೋಟಗಳು ಸಂಭವಿಸಿದರೂ ಸ್ಥಳೀಯಾಡಳಿತವು ಕೂಡ ಗಮನ ಹರಿಸದೇ ಇರುವುದು ಈ ದುರಂತಕ್ಕೆ ಈ ದುರಂತಕ್ಕೆ ಕಾರಣವಾಗಿದೆ.

ಈ ಎಂಆರ್ ಪಿಎಲ್ ನಂತಹ ಕಂಪೆನಿಯಲ್ಲಿ ಆಗಿರುವ ದುರಂತಕ್ಕೆ ಆ ಸಂಸ್ಥೆಯನ್ನು ಹೊಣೆಗಾರನನ್ನಾಗಿಸಿ ಕೇವಲ  ಇಲಾಖೆಯ ಕ್ರಮವಲ್ಲದೆ ನಿರ್ಲಕ್ಷತೆಗೆ ಸಂಭಂದಿಸಿ ಕ್ರಿಮಿನಲ್ ಪ್ರಕರಣದ ಜೊತೆಗೆ ಪರಿಸರ ಹಾನಿ ಮತ್ತು ಜೀವ ಹಾನಿಗೆ ಮತ್ತು ಕಟ್ಟಡ, ಮನೆಗಳ ಹಾನಿಗೆ ನಷ್ಟ ಭರ್ತಿಯನ್ನು ಕಂಪನಿಯು ನೀಡುವಂತೆ ಸ್ಥಳೀಯ ಆಡಳಿತ ಮತ್ತು ಸರಕಾರಗಳೂ ಕ್ರಮ ಕೖಗೊಳ್ಳಬೇಕೆಂದು ಡಿವೖಎಫ್ಐ ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article