ಅಂಗನವಾಡಿ ಕಾರ್ಯಕರ್ತೆಯರ ರ‍್ಯಾಲಿ

ಅಂಗನವಾಡಿ ಕಾರ್ಯಕರ್ತೆಯರ ರ‍್ಯಾಲಿ


ಮಂಗಳೂರು: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು.

ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಮಿನಿವಿಧಾನ ಸೌಧದವರೆಗೆ ಜಾಥಾ ನಡೆಸಿ ಬಳಿಕ ಪ್ರತಿಭಟನೆ ನಡೆಸಿದರು. 

ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷೆ ತಾರಾ ಬಲ್ಲಾಳ್ ಅಂಗನವಾಡಿ ಕೇಂದ್ರಗಳು ಆರಂಭಗೊಂಡು 50 ವರ್ಷಗಳು ಕಳೆದಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಡಿಮೆ ಗೌರವ ಧನಕ್ಕೆ ದುಡಿಯುತ್ತಿದ್ದಾರೆ. ಕಾರ್ಯಕರ್ತೆಯರಿಗೆ 12,000 ರೂ., ಸಹಾಯಕಿಯರಿಗೆ 6,000 ರೂ. ನೀಡಲಾಗುತ್ತಿದೆ. ಅದು ಕೂಡಾ ಎರಡು ಮೂರು ತಿಂಗಳಿಗೊಮ್ಮೆ ಖಾತೆಗೆ ಜಮೆ ನೀಡಲಾಗುತ್ತಿದೆ. ಇನ್ಮುಂದೆ ಪ್ರತೀ ತಿಂಗಳ 5ನೇ ತಾರೀಕಿ ನೊಳಗೆ ಗೌರವಧನ ನೀಡಬೇಕು. ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ಜಾರಿಗೊಳಿಸ ಬೇಕು ಎಂದು ಆಗ್ರಹಿಸಿದರು. 

ಸರಕಾರ ಈ ಬಾರಿ ನೀಡಿದ ಸಮವಸ್ತ್ರ ತೀರಾ ಕಳಪೆಯಾಗಿದೆ. ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಎಸ್‌ಐ ಅಥವಾ ಆರೋಗ್ಯ ವಿಮೆ ನೀಡಬೇಕು. 2011ರಿಂದ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರ್ಯಾಚ್ಯುಟಿ ಹಣ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. 

ಸಂಘದ ಕಾರ್ಯದರ್ಶಿ ಆಶಾಲತಾ ಎಂ.ವಿ., ಪದಾಧಿಕಾರಿಗಳಾದ ಗುಲಾಬಿ, ರೇಣುಕಾ, ವಿಶಾಲಾಕ್ಷಿ, ಶೀಲಾವತಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article