ಮಾಡೂರು ಯೂಸುಫ್ ಕೊಲೆ: ಮೂವರ ಆರೋಪ ಸಾಬೀತು, ನಾಲ್ವರು ದೋಷಮುಕ್ತ

ಮಾಡೂರು ಯೂಸುಫ್ ಕೊಲೆ: ಮೂವರ ಆರೋಪ ಸಾಬೀತು, ನಾಲ್ವರು ದೋಷಮುಕ್ತ

ಮಂಗಳೂರು: ಹನ್ನೊಂದು ವರ್ಷದ ಹಿಂದೆ ನಗರದ ಸಬ್ ಜೈಲಿನಲ್ಲಿ ಮಾಡೂರು ಯೂಸುಫ್ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಆರೋಪ ಸಾಬೀತಾಗಿದೆ ಮತ್ತು ನಾಲ್ವರನ್ನು ದೋಷಮುಕ್ತಗೊಳಿಸಿ ಜಿಲ್ಲಾ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ.

ಹತ್ಯೆ ಆರೋಪ ಎದುರಿಸುತ್ತಿದ್ದ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರ್ ಎಂಬವರನ್ನು ದೋಷಿಗಳು ಮತ್ತು ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ, ಲತೀಶ್ ಪೂಜಾರಿ ಎಂಬವರು ನಿರ್ದೋಷಿಗಳು ಎಂದು ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ತೀರ್ಪು ನೀಡಿದ್ದಾರೆ. 

ದೋಷಿಗಳ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಬಾಕಿ ಇದೆ. ಈ ಪ್ರಕರಣದಲ್ಲಿ ದೋಷಮುಕ್ತಗೊಂಡಿರುವ ಸತೀಶ್ ಪೂಜಾರಿ ಈಗಾಗಲೆ ಮೃತಪಟ್ಟಿದ್ದಾರೆ.

2015ರ ನವೆಂಬರ್ 2ರಂದು ಮಾಡೂರು ಯೂಸುಫ್ನನ್ನು ಜೈಲಿನಲ್ಲೇ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಅಂದಿನ ಎಸಿಪಿ ತಿಲಕಚಂದ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article