ಮನ ಸೂರೆಗೊಂಡ ಕರ್ಣಾಟಕ ಬ್ಯಾಂಕ್ 'ಸ್ವರ ತರಂಗ್ ಸಂಗೀತ' ಕಾರ್ಯಕ್ರಮ
Tuesday, September 29, 2026
ಮಂಗಳೂರು: ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಪಡಿಸುವ ಉತ್ಕೃಷ್ಟ ಮಟ್ಟದ ಕರ್ಣಾಟಕ ಬ್ಯಾಂಕ್ ‘ಸ್ವರ ತರಂಗ್’ ಸಂಗೀತ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಯಿತು.
ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್ ನಾಯಕ್, ಸದಸ್ಯರಾದ ರಮೇಶ್ ಕೆ.ಜಿ. ಮುರಳೀಧರ್ ಶೆಣೈ, ಸೌಮ್ಯ ಕಾಮತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮೊದಲಿಗೆ ಕೋಲ್ಕೊತಾದ ವಿದುಷಿ ರುಚಿರಾ ಪಾಂಡಾ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು. ಅವರಿಗೆ ಉತ್ತರ ಕನ್ನಡದ ಸತೀಶ್ ಭಟ್ ಹೆಗ್ಗಾರ್ ಹಾರ್ಮೋನಿಯಂನಲ್ಲಿ ಹಾಗೂ ಮುಂಬಯಿಯ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಸಾಥ್ ನೀಡಿದರು. ಬಳಿಕ ಹೊಸದಿಲ್ಲಿಯ ಅಭಯ್ ರುಸ್ತುಂ ಸಪೋರಿ ಅವರಿಂದ ಸಂತೂರ್ ವಾದನ ನಡೆಯಿತು. ಅವರಿಗೆ ಮುಂಬಯಿಯ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಸಾಥ್ ನೀಡಿದರು. ಬೃಹತ್ ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಭಾಗವಹಿಸಿ ಸಂಗೀತ ಆಸ್ವಾದಿಸಿದರು.

