ದ.ಕ. ಜಿಲ್ಲೆ ಮಂಗಳೂರು ಮರುನಾಮಕರಣ: ಮೌಖಿಕ ಒಪ್ಪಿಗೆ
ನಗರದಲ್ಲಿ ಇಂದು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಗೆ 400 ಹೆಚ್ಚುವರಿ ಬೆಡ್ಗಳ ಬೇಡಿಕೆಯ ಮೇರೆಗೆ ಸರಕಾರ ಪ್ರಾಥಮಿಕ ಹಂತದಲ್ಲಿ 200 ಬೆಡ್ಗಳನ್ನು ಮಂಜೂರುಗೊಳಿಸಿದೆ. ವೆನ್ಲಾಕ್ನಲ್ಲಿ ಉತ್ತಮ ಸೇವೆ ದೊರೆಯುತ್ತಿರುವುದರಿಂದ ಇಲ್ಲಿ ಬೇಡಿಕೆಯೂ ಹೆಚ್ಚುತ್ತಿದೆ. ದುಡ್ಡಿರುವವರೂ ವೆನ್ಲಾಕ್ ನ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಕಾಸರಗೋಡು ಮೊದಲಾದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಅಲ್ಲಿಂದ ವೆನ್ಲಾಕ್ ಗೆ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿರುವುದರಿಂದ ಒತ್ತಡ ಹೆಚ್ಚುತ್ತಿದೆ. ಇದಕ್ಕಾಗಿ ಸ್ಟಾಂಡರ್ಡ್ ಅಪರೇಶನ್ ಪ್ರೊಸೀಜರ್ (ಎಸ್‌ಒಪಿ)ಯನ್ನು ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಗೂ ಸಲಹೆ ನೀಡಲಾಗಿದೆ.
ಸಂದಿಗ್ಧ ಪರಿಸ್ಥಿತಿಯ ರೋಗಿಗಳನ್ನು ಹೊರತುಪಡಿಸಿ ಉಳಿದಂತೆ ಆಯಾ ಜಿಲ್ಲೆ, ತಾಲೂಕುಗಳ ರೋಗಿಗಳಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕು. ಇದಕ್ಕಾಗಿ ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಬೇಕು. ಇದಕ್ಕಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ. ಬೈಂದೂರು ಮತ್ತು ಮೂಡಬಿದ್ರೆಯಲ್ಲಿ ಹೊಸ ತಾಲೂಕು ಆಸ್ಪತ್ರೆ ಹಾಗೂ ಭಟ್ಕಳದ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.
ಡಿಸಿ ಮನ್ನಾ ಜಾಗ ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಇತ್ಯರ್ಥವಾಗದ ಬಗ್ಗೆ ಉಸ್ತುವಾರಿ ಸಚಿವರ ಬಗ್ಗೆ ದಲಿತ ನಾಯಕರ ಅಸಮಾಧಾನದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಅವರು ನಮ್ಮ ಸಹೋದರರು. ಅವರ ನೋವು ನಮಗೆ ಅರ್ಥವಾಗುತ್ತದೆ. ಇದು ಕಂದಾಯ ಇಲಾಖೆಯ ಸಮಸ್ಯೆ ಆಗಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಸಚಿವರ ಬಳಿ ಹೇಳಿದ್ದು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆಯೂ ಕೋರಲಾಗಿತ್ತು. ಬಂದಿಲ್ಲ ಎಂದಾದರೆ ಈ ಬಗ್ಗೆ ಸರಕಾರ ನಿರ್ಣಯ ಕೈಗೊಳ್ಳಬೇಕಿದೆ. ಮೂಡುಬಿದಿರೆ ಸತ್ಯಸಾರಮಣಿ ಕ್ಷೇತ್ರದ ಅನುದಾನ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು, ಅದನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ಬಗ್ಗೆ ಕೇಳಿ ಬಂದಿರುವ ಆಕ್ಷೇಪಗಳು ಗಂಭೀರವಾಗಿದ್ದು, ಮತದಾನವೆಂಬ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದಂತಾಗಿದೆ. ಮತದಾರರ ಹೆಸರನ್ನು ಅಳಿಸುವುದು ಚುನಾವಣಾ ಆಯೋಗದ ಕೆಲಸವಲ್ಲ. ಬದಲಿಗೆ ಪ್ರತಿಯೊಬ್ಬ ಅರ್ಹ ಮತದಾರರಿಗೆ ಮತದಾನದ ಹಕ್ಕು ಕಲ್ಪಿಸುವುದು ಅದರ ಜವಾಬ್ದಾರಿ. ಹಾಗಾಗಿ ಚುನಾವಣಾ ಆಯೋಗದ ಕಾರ್ಯವೈಖರಿ ದುರದೃಷ್ಟಕರ ಎಂದರು.
ಮುಡಾ ಅಧ್ಯಕ್ಷ ಸಂತೋಷ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್, ಮುಖಂಡರಾದ ಸಲೀಂ, ಇಕ್ಬಾಲ್ ಉಪಸ್ಥಿತರಿದ್ದರು.