ಪುತ್ತೂರಿನಲ್ಲಿ ಬಲಿಪ ಪ್ರಸಾದ ಭಾಗವತರ ಸಂಸ್ಮರಣೆ: ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ 14ನೇ ಸನ್ಮಾನ

ಪುತ್ತೂರಿನಲ್ಲಿ ಬಲಿಪ ಪ್ರಸಾದ ಭಾಗವತರ ಸಂಸ್ಮರಣೆ: ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ 14ನೇ ಸನ್ಮಾನ


ಮೂಡುಬಿದಿರೆ: ಬಲಿಪ ಪ್ರಸಾದ ಭಾಗವತ 50ರ ನೆನಪು "ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್" ಸರಣಿಯ 14ನೇ ಕಾರ್ಯಕ್ರಮವು ಪುತ್ತೂರಿನ  ಸೈಂಟ್ ಫಿಲೋಮಿನಾ ಕಾಲೇಜಿನ ಪಿ.ಜಿ. ವಿಭಾಗದ ಸಭಾಂಗಣದಲ್ಲಿ  ಬುಧವಾರ  ಜರಗಿತು.

ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಲಿಪ ಪ್ರಸಾದರೊಂದಿಗೆ 14 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದ್ದ ಸುದೀರ್ಘ ಕಾಲದ ಒಡನಾಡಿ, ಒಟ್ಟು 38 ವರ್ಷಗಳ ತಿರುಗಾಟದ ಅನುಭವವಿರುವ ಹನುಮಗಿರಿ ಮೇಳದ ಪ್ರಸಿದ್ಧ ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರಿಗೆ ಸರಣಿಯ 14ನೇ ಸನ್ಮಾನವನ್ನು ನೀಡಿ ಗೌರವಿಸಲಾಯಿತು.

ಖ್ಯಾತ ಯಕ್ಷಗಾನ ಸಂಘಟಕ, ಮೂಡುಬಿದಿರೆ ಯಕ್ಷಸಂಗಮದ ಅಧ್ಯಕ್ಷ ಎಂ. ಶಾಂತರಾಮ ಕುಡ್ವ ಬಲಿಪ ಪ್ರಸಾದರ ಸಂಸ್ಮರಣೆಗೈದರು. ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ಅಳಿಯೂರು ರುಕ್ಕಯ್ಯ ಪೂಜಾರಿ ನಿಗದಿಯಾಗಿರುವ ಸರಣಿಯ ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು. ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ರಿಚರ್ಡ್ ಕರ್ಡೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಕಾಲೇಜಿನ ಫರ್ಫಾರ್ಮಿಂಗ್ ಆರ್ಟ್ಸ್ ಅಸೋಸಿಯೇಶನ್ ಸಂಯೋಜಕ ಪ್ರೊ. ಪ್ರಶಾಂತ್ ರೈ ಸ್ವಾಗತಿಸಿದರು. ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ ಸನ್ಮಾನಪತ್ರ ವಾಚಿಸಿದರು.

ಸರಣಿ ಕಾರ್ಯಕ್ರಮದ ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಯಕ್ಷಗುರು ಅನಂತ ಪದ್ಮನಾಭ ಹೊಳ್ಳ, ವಾಸ್ತು ತಜ್ಞ ಮಾರೂರು ರಾಘವೇಂದ್ರ ಭಂಡಾರ್ಕಾರ್, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಅತಿಥಿಗಳನ್ನು ಗೌರವಿಸಿದರು. ಕಾಲೇಜಿನ ರಿಜಿಸ್ಟ್ರಾರ್ ಡಾ. ನೋರ್ಬರ್ಟ್ ಮಸ್ಕರೇನಸ್,

ನಿವೃತ್ತ ಪೊಲೀಸ್ ಅಧಿಕಾರಿ ವಾಸು ನಾಯ್ಕ, ಸಂಸ್ಕೃತ ಅಧ್ಯಾಪಕ ವೆಂಕಟೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಪ್ರೊ. ಪ್ರಶಾಂತ್ ರೈ ಅವರ ಭಾಗವತಿಕೆಯಲ್ಲಿ "ಗುರುದಕ್ಷಿಣೆ" ತಾಳಮದ್ದಳೆ ಜರಗಿತು. ಏಕಲವ್ಯನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಮತ್ತು ದ್ರೋಣಾಚಾರ್ಯ ಪಾತ್ರದಲ್ಲಿ ವೆಂಕಟೇಶ್ ಭಟ್ ವಿಜ್ರಂಭಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article