ಸೆ.17 ರಂದು ಪವರ್ ಫ್ರೆಂಡ್ಸ್ ಬೆದ್ರದಿಂದ ಊದು ಪೂಜೆ
Wednesday, September 16, 2026
ಮೂಡುಬಿದಿರೆ: 63ನೇ ವಷ೯ದ ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಪವರ್ ಫ್ರೆಂಡ್ಸ್ ಬೆದ್ರದ 5ನೇ ವಷ೯ದ ಪಿಲಿನಲಿಕೆಯ ಅಂಗವಾಗಿ ಸೆ. 17ರಂದು ಸಂಜೆ 7.00ಗಂಟೆಗೆ ರಿಂಗ್ ರೋಡ್ ನ ಪ್ರೀತಂ ಗಾಡ೯ನ್ ಹಾಲ್ ನಲ್ಲಿ ಊದು ಪೂಜೆ ಕಾಯ೯ಕ್ರಮ ನಡೆಯಲಿದೆ.
ಊದು ಪೂಜೆಯ ಪ್ರಯುಕ್ತ ರಾತ್ರಿ 8.30ಕ್ಕೆ ಜಿಲ್ಲೆಯ ಸುಪ್ರಸಿದ್ದ ಗಾಯಕರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಚಲನಚಿತ್ರ ನಟ ಶೈನ್ ಶೆಟ್ಟಿ ಸಹಿತ ಹೆಸರಾಂತ ಚಲನಚಿತ್ರ ನಟನಟಿಯರು ಭಾಗವಹಿಸಲಿದ್ದಾರೆ.
ಸೆ.18ರಂದು ಬೆಳಿಗ್ಗೆ 8.30ಕ್ಕೆ ಪ್ರೀತಂ ಗಾಡ೯ನ್ ನಿಂದ ಹನುಮಂತ ದೇವಸ್ಥಾನ ಹಾಗೂ ಸಮಾಜ ಮಂದಿರದವರಿಗೆ ಅದ್ಧೂರಿ ಹುಲಿವೇಷದ ಮೆರವಣಿಗೆ. ಸಂಜೆ 4.00ಗಂಟೆಯಿಂದ 6.00ರವರೆಗೆ ಬಸ್ ನಿಲ್ದಾಣದ ಆವರಣದಲ್ಲಿ ಪಿಲಿ ನಲಿಕೆ ಕಾಯ೯ಕ್ರಮ. ನಂತರ ಮಂಗಳೂರಿನ ಸುಪ್ರಸಿದ್ಧ ಚೆಂಡೆ ಬಳಗ ಶಬರಿ ಚೆಂಡೆ ಇವರಿಂದ ಚೆಂಡೆ ನೃತ್ಯ ನಡೆಯಲಿದೆ.