63ನೇ ವರ್ಷದ ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ: ಸರ್ವೋದಯ ಫ್ರೆಂಡ್ಸ್ ಬೆದ್ರ18ನೇ ವರ್ಷದ ಹುಲಿವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ
Sunday, September 6, 2026
ಮೂಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಬೆದ್ರ (ರಿ.) ವತಿಯಿಂದ ಆಯೋಜಿಸಲಾಗುತ್ತಿರುವ 18ನೇ ವರ್ಷದ ಹುಲಿವೇಷ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮೂಡುಬಿದಿರೆಯ ಹನುಮಾನ್ ದೇವಸ್ಥಾನದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು.
ಸರ್ವೋದಯ ಫ್ರೆಂಡ್ಸ್ ಬೆದ್ರ (ರಿ.) ಅಧ್ಯಕ್ಷರಾದ ಕೃಷ್ಣರಾಜ ಗುರು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ವೋದಯ ಫ್ರೆಂಡ್ಸ್ ಬೆದ್ರ (ರಿ.) ಗೌರವಾಧ್ಯಕ್ಷರಾದ ಸುದರ್ಶನ್ ಎಂ. ಮಾತನಾಡಿ ಹುಲಿವೇಷ ಕೇವಲ ಮನರಂಜನೆಯ ಆಚರಣೆಯಲ್ಲ; ಇದು ತುಳುನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ, ಭಕ್ತಿ ಮತ್ತು ಸಹೋದರತ್ವದ ಪ್ರತೀಕವಾಗಿದೆ ಎಂದು ತಿಳಿಸಿದರು.
ಮೂಡುಬಿದಿರೆ ಹಾಗೂ ವಕೀಲ ಚೇತನ್ ಕುಮಾರ್ ಶೆಟ್ಟಿ, ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಸದಸ್ಯರಾದ ಪ್ರಕಾಶ್ ಕುಂದರ್, ಗುರುಪ್ರಸಾದ್ ಅಂಚನ್, ಅಕ್ಷಯ್ ಕೆ. ಜೈನ್, ರಂಜನ್ ರೈ, ಸಂತೋಷ್ ಮೂಡುಬಿದಿರೆ, ಮನೋಹರ್ ಹಾಗೂ ಕೌಶಿತ್ ಸೇರಿದಂತೆ ಸಂಘದ ಇತರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
2008ರಿಂದ ನಿರಂತರವಾಗಿ ಹುಲಿವೇಷದ ಮೂಲಕ ತುಳುನಾಡಿನ ಸಂಸ್ಕೃತಿ, ಪರಂಪರೆ, ಭಕ್ತಿ, ಸ್ನೇಹ ಮತ್ತು ಒಗ್ಗಟ್ಟಿನ ಸಂದೇಶವನ್ನು ಸಾರುತ್ತಿರುವ ಸರ್ವೋದಯ ಫ್ರೆಂಡ್ಸ್ ಬೆದ್ರ (ರಿ.) ತಂಡವು ಇದೀಗ 18ನೇ ವರ್ಷದ ಹುಲಿವೇಷ ಆಚರಣೆಗೆ ಸಜ್ಜಾಗಿದ್ದು ಮುಂದಿನ ಪೀಳಿಗೆಗೂ ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಈ ವರ್ಷದ ಹುಲಿವೇಷವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ತಂಡ ನಿರ್ಧರಿಸಿದೆ.
