ಮೂಡುಬಿದಿರೆ ತಾಲೂಕಿನ ವಿವಿಧ ಚಚ್೯ಗಳಲ್ಲಿ ಸಂಭ್ರಮದ "ಮೋಂತಿ ಫೆಸ್ತ್"
Tuesday, September 8, 2026
ಮೂಡುಬಿದಿರೆ: ಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಮೂಡುಬಿದಿರೆ ತಾಲೂಕಿನ ವಿವಿಧ ಚಚ್೯ಗಳಲ್ಲಿ "ತೆನೆ ಹಬ್ಬ"ವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹೋಲಿ ರೋಸರಿ ಚರ್ಚ್ ಅಲಂಗಾರು ಇಲ್ಲಿ ಧಮ೯ಗುರುಗಳಾದ ಮೇಲ್ವಿನ್ ನೋರೋನ್ಹ, ದೀಪಕ್ ನೋರೋನ್ಹ , ಜೋಯ್ ಸನ್ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ತೆನೆಗೆ ಪೂಜೆಯನ್ನು ಸಲ್ಲಿಸಲಾಯಿತು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ರಾಜೇಶ್ ಕಡಲಕೆರೆ, ಸಂಯೋಜಕರಾದ ಸಂದೀಪ್ ಅಲಂಗಾರು , ಕಾರ್ಯದರ್ಶಿ ಲಾರೆನ್ಸ್ ಡಿ ಕುನ್ಹ ಹಾಗೂ ಭಕ್ತಾಧಿಗಳು ಹಾಜರಿದ್ದರು.
ಗಂಟಾಲ್ ಕಟ್ಟೆ: ಇಲ್ಲಿನ ನಿತ್ಯ ಸಹಾಯ ಮಾತಾ ದೇವಾಲಯದಲ್ಲಿ ಧಮ೯ಗುರು ರೊಕ್ವಿ ವಿಕ್ಟರ್ ಡಿ'ಸೋಜಾ ನೇತೃತ್ವದಲ್ಲಿ ಮೋಂತಿ ಪೆಸ್ತ್ ನ್ನು ಶ್ರದ್ಧಾ, ಭಕ್ತಿ ಸಂಭ್ರಮಮದಿಂದ ಅಚರಿಸಲಾಯಿತು.
ಧಮ೯ಗುರುಗಳಾದ ವಲೇರಿಯನ್ ಬರೆಟ್ಟೋ ಮತ್ತು ಅಶ್ವಿನ್ ಖಡೋ೯ಜಾ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮೂಡುಬಿದಿರೆ ಚಚ್೯: ಇಲ್ಲಿನ ಕೊಪು೯ಸ್ ಕ್ರಿಸ್ತಿ ಚಚ್೯ನಲ್ಲಿ ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಧಮ೯ಗುರು ಓನಿಲ್ ಡಿ'ಸೋಜಾ ಪೂಜಾ ವಿಧಿ ವಿಧಾನಗಳನ್ನು ಭಕ್ತಿಯಿಂದ ನೆರವೇರಿಸಿದರು.



