ಬಿಜೆಪಿ-ಎಸ್‌ಡಿಪಿಐ ಸೇವಾಕೇಂದ್ರದ ಬಗ್ಗೆ ಚಿಲ್ಲರೆ ರಾಜಕೀಯ: ಎಚ್. ಮಹಮ್ಮದ್ ಆಲಿ ವ್ಯಂಗ್ಯ

ಬಿಜೆಪಿ-ಎಸ್‌ಡಿಪಿಐ ಸೇವಾಕೇಂದ್ರದ ಬಗ್ಗೆ ಚಿಲ್ಲರೆ ರಾಜಕೀಯ: ಎಚ್. ಮಹಮ್ಮದ್ ಆಲಿ ವ್ಯಂಗ್ಯ


ಪುತ್ತೂರು: ಜನರಿಗೆ ಉಪಯೋಗಕ್ಕೆ ಪ್ರಸಕ್ತವಾಗಿಲ್ಲದ ಸ್ಥಳವಾಗಿರುವ ಪುತ್ತೂರಿನ ಸಿಟಿಒ ಗುಡ್ಡೆಯಲ್ಲಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತ ಇಲಾಖೆಯ ಸೇವಾಕೇಂದ್ರದ ವಿಚಾರವನ್ನು ರಾಜಕೀಯಗೊಳಿಸುವ ಚಿಂತನೆ ಮಾಡಿದರೆ ಅವರಿಂದ ರಿಲೇ ಕೋಲು ಪಡೆದುಕೊಂಡು ಎಸ್‌ಡಿಪಿಐ ಓಡುವ ಕೆಲಸ ಮಾಡುತ್ತಿದೆ ಎಂದು ಗ್ರಾಮಾಂತರ ಜಿಲ್ಲಾ ಪ್ರಚಾರಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ವ್ಯಂಗ್ಯವಾಡಿದ್ದಾರೆ. 

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪುತ್ತೂರು ಪೇಟೆಯಿಂದ ಸಾಕಷ್ಟು ದೂರು ಇರುವ ಈ ಗುಡ್ಡೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯ ಸೇವಾ ಕೇಂದ್ರ ನಿರ್ಮಿಸಿರುವುದು ಅಧಿಕಾರಿಗಳ ಮೂರ್ಖತನಕ್ಕೆ ಸಾಕ್ಷಿಯಾಗಿದೆ. ಇದರ ಜತೆಗೆ ಅಧಿಕಾರಿಗಳ ಜತೆಗೆ ಸ್ಪಂಧಿಸಿದ ಜನಪ್ರತಿನಿಧಿಗಳ ಹುಂಬತನಕ್ಕೆ ನಾಚಿಕೆಯಾಗುತ್ತಿದೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಈ ಕಟ್ಟಡಕ್ಕೆ ಅನುದಾನ ಮಂಜೂರುಗೊಂಡಿತ್ತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಕಾಮನ್ ಸರ್ವೀಸ್ ಸೆಂಟರ್ ಗುಡ್ಡೆಯಲ್ಲಿ ನಿರ್ಮಾಣವಾಗಿತ್ತು. 1.40 ಕೋಟಿ ವೆಚ್ಚದ 2,000 ಚದರ ಅಡಿ ವ್ಯಾಪ್ತಿಯ ಈ ಕಟ್ಟಡ ಸಿಎಸ್‌ಸಿ ಕೇಂದ್ರಕ್ಕೆ ಬೇಕಾಗಿರಲಿಲ್ಲ. ಅಲ್ಪಸಂಖ್ಯಾತ ಇಲಾಖಾ ಸೌಲಭ್ಯಗಳನ್ನು ನಿರ್ವಹಿಸಲು ಹಾಗೂ ಮಾಹಿತಿ ನೀಡಲು ಚಿಕ್ಕ ಕೊಠಡಿ ಸಾಕು. ಇಂತಹ ಬೃಹತ್ ಕಟ್ಟಡವನ್ನು ಜನೋಪಯೋಗಿಯಾಗಿಲ್ಲದ ಜಾಗದಲ್ಲಿ ಕಟ್ಟುವ ಅಗತ್ಯತೆ ಏನಿತ್ತು ಎಂದು ಅವರು ಪ್ರಶ್ನಿಸಿದರು.

ಕಾಮನ್ ಸೆನ್ಸ್ ಇಲ್ಲದ ಅಧಿಕಾರಿಗಳು

ಈ ಕಾಮನ್ ಸರ್ವೀಸ್ ಸೆಂಟರ್ ನಿರ್ಮಾಣವನ್ನು ಪೇಟೆಯಿಂದ ದೂರವಾಗಿ ನಿರ್ಮಿಸಿರುವುದು ಕಾಮನ್ ಸೆನ್ಸ್ ಇಲ್ಲದ ಅಧಿಕಾರಿಗಳ ಮೂರ್ಖ ತೀರ್ಮಾನ. ಇದೀಗ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕಟ್ಟಡ ಅನಾಥವಾಗಿದೆ. ಇದರಿಂದ ಮುಸ್ಲಿಂರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರ ಅವಧಿಯಲ್ಲಿ ಮಾಡಿದ ಈ ಕಟ್ಟಡ ನಿರ್ಮಾಣಕ್ಕೆ ಮೊದಲು ಇದು ಸೂಕ್ತ ಜಾಗ ಅಲ್ಲ ಎಂಬ ಯೋಚನೆಯೂ ಇಲ್ಲದೆ ಮಾಡಿದ್ದಾರೆ. ಈಗ ಉಪಯೋಗ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಎಸ್‌ಡಿಪಿಐ ಕಟ್ಟಡ ವಿಚಾರದಲ್ಲಿ ಅನಗತ್ಯವಾದ ರಾಜಕೀಯ ಮಾಡುತ್ತಿದೆ. ಬಿಜೆಪಿ ಮತ್ತು ಎಸ್‌ಡಿಪಿಐಗೆ ಕಾಂಗ್ರೇಸ್ ಪಕ್ಷವನ್ನು ಟೀಕಿಸದಿದ್ದರೆ ಮೈಲೇಜ್ ಸಿಗುವುದಿಲ್ಲ. ಅದಕ್ಕಾಗಿ ಪ್ರಯತ್ನ ಪಡುತ್ತಿದ್ದಾರೆ ಎಂದು ಆಲಿ ಹೇಳಿದರು.

ಬಾಲಕರ ಹಾಸ್ಟೆಲ್ ಮಂಜೂರು:

ಮಾಹಿತಿ ಪಡೆಯಲು ಹಾಗೂ ಅರ್ಜಿಗಳನ್ನು ಸಲ್ಲಿಸಲು ಸಂಪರ್ಕಕ್ಕೆ ಹತ್ತಿರ ಇರುವ ಜಾಗವನ್ನು ಆಯ್ಕೆ ಮಾಡುವ ಬದಲು ಗುಡ್ಡದ ಮೇಲಿರುವ ಕಟ್ಟಡಕ್ಕೆ ಹೋಗಿ ಎನ್ನುವುದು ಮೂರ್ಖತನದ ಕೆಲಸ. ವಿದ್ಯಾರ್ಥಿಗಳು ಹಾಗೂ ಬಡವರ್ಗದವರು ಅಲ್ಲಿಗೆ ಹೋಗಲು ಅಟೋರಿಕ್ಷಾವೇ ಗತಿ. ಇಂತಹ ಜಾಗದಲ್ಲಿ ಮುಸ್ಲಿಂ ಬಾಲಕರ ವಸತಿಗೃಹ ಮಾಡಬೇಕು ಎಂಬ ಹಿನ್ನಲೆಯಲ್ಲಿ ಶಾಸಕರ ಶಿಫಾರಸ್ಸಿನಿಂದ ಸಚಿವ ಝಮೀರ್ ಅಹಮ್ಮದ್ ಅವರು ಇಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಮಕ್ಕಳಿಗಾಗಿ 50 ಮಂಚಗಳು ಇಲ್ಲಿಗೆ ಬಂದಿದೆ. ಶಾಸಕರ ಮುತುವರ್ಜಿಯಿಂದ ಇಲ್ಲಿಗೆ ಬಂದಿರುವ ಹಾಸ್ಟೆಲ್ ವಿಚಾರದಲ್ಲಿ ಬಿಜೆಪಿ ಬ್ಯಾರಿಗಳ ಮಾತು ಕೇಳಿಕೊಂಡು ಅನ್ಯಾಯ ಮಾಡಬೇಡಿ ಎಂದು ಅವರು ಹೇಳಿದರು. 

ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಮಾಜಿ ಅಧ್ಯಕ್ಷ ಶಕೂರು ಹಾಜಿ, ಮುಂಡೂರು ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್, ನಗರ ಕಾಂಗ್ರೇಸ್ ಮಾಜಿ ಕಾರ್ಯದರ್ಶಿ ವಿಲ್ಫ್ರೆಡ್ ಫೆರ್ನಾಂಡೀಸ್, ಯುವಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಪರ್ಲಡ್ಕ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಕುಂತೂರು, ಮುಸ್ಲಿಂ ಮುಖಂಡ ಸಾಲಿ ಶಾಂತಿನಗರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article