ಕನಕಮಜಲಿನಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ: ಆನೆ ಹಾವಳಿ ತಡೆಯಲು ಸೂಕ್ತ ಕ್ರಮಕ್ಕೆ ಕೃಷಿಕರಿಂದ ಅರಣ್ಯ ಇಲಾಖೆಗೆ ಒತ್ತಾಯ
ಆನೆಗಳು ಮನೆಗಳ ಸಮೀಪ ಹಾಗೂ ಜನವಸತಿ ಪ್ರದೇಶಗಳಿಗೆ ಬರುತ್ತಿರುವುದರಿಂದ ಗ್ರಾಮಸ್ಥರ ಜೀವಕ್ಕೂ ಅಪಾಯ ಎದುರಾಗುವ ಆತಂಕ ಇದೆ. ಆದುದರಿಂದ ಗ್ರಾಮದ ಕೃಷಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ತಕ್ಷಣ ಸುರಕ್ಷಿತವಾಗಿ ಕಾಡಿನತ್ತ ಅಟ್ಟಬೇಕು, ಆನೆಗಳ ಚಲನ ವಲನ ನಿರೀಕ್ಷಿಸಲು ಅರಣ್ಯ ಇಲಾಖೆಯಿಂದ ವಿಶೇಷ ಗಸ್ತು ತಂಡವನ್ನು ನಿಯೋಜಿಸಬೇಕು. ಆನೆಗಳು ಗ್ರಾಮಕ್ಕೆ ಪ್ರವೇಶಿಸುವ ಮಾರ್ಗಗಳನ್ನು ಗುರುತಿಸಿ, ಅಲ್ಲಿ ಸೋಲಾರ್ ಬೇಲಿ,ಆನೆ ತಡೆ ಕಂದಕ ಹಾಗೂ ಇತರ ಶಾಶ್ವತ ತಡೆ ವ್ಯವಸ್ಥೆಗಳನ್ನು ನಿರ್ಮಿಸಬೇಕು.ಆನೆಗಳ ಹಾವಳಿಯಿಂದ ಹಾನಿಗೊಳಗಾದ ಬೆಳೆಹಾನಿಗೆ ಸೂಕ್ತ ಪರಿಹಾರವನ್ನು ಶೀಘ್ರವಾಗಿ ನೀಡಬೇಕು. ಆನೆ ಹಾವಳಿ ಮರುಕಳಿಸದಂತೆ ಶಾಶ್ವತ ಪರಿಹಾರ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಸ್ಥ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಮಾತನಾಡಿ ’ ಕಾಡಾನೆ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಡಾನೆ ಹಾವಳಿ ತಡೆಗೆ ಸೂಕ್ತ ಪರಿಹಾರ ದೊರಕುವ ತನಕ ಹೋರಾಟ ಮುಂದುವರಿಸಲಾಗುವುದು ಎಂದು ಹೋರಾಟ ಸಮಿತಿಯ ಪ್ರಮುಖರು ಹೇಳಿದ್ದಾರೆ.
ಪ್ರಮುಖರಾದ ಎಸ್.ಎನ್.ಮನ್ಮಥ, ಹರೀಶ್ ಮೂರ್ಜೆ, ಸತೀಶ್ ಕೆಮನಬಳ್ಳಿ,ಬಾಲಕೃಷ್ಣ ಕೀಲಾಡಿ, ಶ್ರೀಧರ ಕುತ್ಯಾಳ, ವಸಂತ ಗಬ್ಬಲಡ್ಕ, ರಾಧಾಕೃಷ್ಣ ಪಿ.ಎಂ., ವಿಜಯಕುಮಾರ್ ನರಿಯೂರು, ಪುರುಷೋತ್ತಮ ನಂಗಾರು, ಮಹಮ್ಮದ್ ಫವಾಝ್, ನಾರಾಯಣ ಗೌಡ ಬೊಮ್ಮೆಟ್ಟಿ, ಜಯರಾಮ ರೈ ಜಾಲ್ಸೂರು,ಶೇಖರ ಮಡ್ತಿಲ, ಶಾಂತಾರಾಮ ಕಣಿಲೆಗುಂಡಿ, ಅನಂತ ಖಂಡಿಗೆಮೂಲೆ, ಮಹೇಶ್ ಜಬಳೆ, ಸುಧೀರ್ ಜಬಳೆ, ಗಣೇಶ್ ಕಜೆಗದ್ದೆ, ಈಶ್ವರ ಕೊರಂಬಡ್ಕ, ದಿನೇಶ್ ರಾವ್ ಹೇಮಂತ್ ಮಠ, ಮನೋಜ್ ನರಿಯೂರು,ದುಗ್ಗಪ್ಪ ಮಾಸ್ತರ್,ಮೋಹನ್ ನಂಗಾರು,ಭಾಸ್ಕರ ನರಿಯೂರು,ಆನಂದ ಮಾಸ್ತರ್ ಅಕ್ಕಿಮಲೆ, ತೇಜಪ್ರಸಾದ್ ಬುಡ್ಲೆಗುತ್ತು, ತಿಲೋತ್ತಮ ಕೊಲ್ಲಂತ್ತಡ್ಕ, ಜಯಪ್ರಸಾದ್ ಕಾರಿಂಜ, ಸುರೇಶ್ ಕುದ್ಕುಳಿ, ಗಣಪತಿ ಭಟ್ ಕುದ್ಕುಳಿ, ಪ್ರಶಾಂತ್ ಅಕ್ಕಿಮಲೆ, ಹೇಮಚಂದ್ರ ಕದಿಕಡ್ಕ, ವೆಂಕಪ್ಪ ನಾಯ್ಕ್ ದೇರ್ಕಜೆ, ಗಂಗಾಧರ ಕನಕಮಜಲು, ಸುನಿಲ್ ಅಕ್ಕಿಮಲೆ, ಪ್ರದೀಪ್ ಕಾಪಿಲ, ಮುರಳೀಧರ ಕೆಮನಬಳ್ಳಿ, ಅಶ್ರಫ್ ಪಂಜಿಗುಂಡಿ, ನೇಮಿಚಂದ್ರ ಬಾಳಾಜೆ, ಸಂದೀಪ್ ಕದಿಕಡ್ಕ,ಬಾಲಸುಬ್ರಹ್ಮಣ್ಯ ಭಟ್ ಕೆಮನಬಳ್ಳಿ, ರಾಮಕೃಷ್ಣ ಭಟ್ ಕೆಮನಬಳ್ಳಿ, ದಿವಾಕರ ಭಟ್ ಕೆಮನಬಳ್ಳಿ,ಉದಯ ಬಾಳಾಜೆ, ಉಮಾನಾಥ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.