ಪಾದಚಾರಿಗೆ ಕಾರುಗಳು ಢಿಕ್ಕಿ: ಮೃತ್ಯು

ಪಾದಚಾರಿಗೆ ಕಾರುಗಳು ಢಿಕ್ಕಿ: ಮೃತ್ಯು

ಉಳ್ಳಾಲ: ಮಸೀದಿಗೆ ತೆರಳಲೆಂದು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಎರಡು ಕಾರುಗಳು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಪಾದಚಾರಿಯು ಮೃತಪಟ್ಟ ಘಟನೆ ರಾ.ಹೆ 66ರ ಕುಂಪಲ ಬೈಪಾಸ್ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.   

ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ಹನೀಫ್ ವಲಿ ಮಹಮ್ಮದ್ (68) ಅಪಘಾತದಲ್ಲಿ ಮೃತಪಟ್ಟವರು.

ಹನೀಫ್ ಅವರು ಮಂಗಳವಾರ ರಾತ್ರಿ ವೇಳೆಗೆ ಕುಂಪಲ ಬೈಪಾಸಿನ ಖಾಸಗಿ ಮಳಿಗೆಗೆ ಭೇಟಿ ನೀಡಿದ ಬಳಿಕ ಹೆದ್ದಾರಿ ಬದಿಯ  ರಸ್ತೆ ದಾಟುತ್ತಿದ್ದರು.ಈ ವೇಳೆ ತಲಪಾಡಿಯಿಂದ ಮಂಗಳೂರಿಗೆ ಆಗಮಿಸಿದ ಕಾರೊಂದು ಢಿಕ್ಕಿ ಹೊಡೆದಿದೆ.ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಹನೀಫ್ ಗೆ ಮಂಗಳೂರಿಗೆ ಆಗಮಿಸಿದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ.

ಇದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಹನೀಫ್ ಅವರನ್ನ ಸ್ಥಳೀಯರು  ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article